ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕದ ಅನ್ನದಾತರೇ ನಿಮಗೆಲ್ಲ ನನ್ನ ಸಮಸ್ಕಾರ: ಕನ್ನಡದಲ್ಲಿ ಮಾತು ಆರಂಭಿಸಿದ ಮೋದಿ

Last Updated 27 ಫೆಬ್ರುವರಿ 2018, 12:58 IST
ಅಕ್ಷರ ಗಾತ್ರ

ದಾವಣಗೆರೆ: ಕನ್ನಡದಲ್ಲೇ ಮಾತು ಆರಂಭಿಸಿದ ಪ್ರಧಾನಿ ನರೇದ್ರ ಮೋದಿ ಅವರು, ಸಾಗರೋ‍ಪಾದಿಯಲ್ಲಿ ಸೇರಿರುವ ಕರ್ನಾಟಕದ ಅನ್ನದಾತರೇ ನಿಮಗೆಲ್ಲ ನನ್ನ ಸನಸ್ಕಾರಗಳು ಎಂದರು.

ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ಜನ್ಮದಿನದ ನೆನಪಿಗಾಗಿ ಮಂಗಳವಾರ ಆಯೋಜಿಸಿರುವ ‘ರೈತ ಬಂಧು ಯಡಿಯೂರಪ್ಪ’ ಸಮಾವೇಶದಲ್ಲಿ ಅವರು ಮಾತನಾಡಿದರು.

ಬಸವೇಶ್ವರ, ಸ್ವಾಮೀಜಿ, ವೀರ ಮಹಿಳೆ ಒನಕೆ ಓಬವ್ವ, ಶಾಂತವೇರಿ ಗೋಪಾಲಗೌಡ ಅವರಿಗೆ ನನ್ನ ಸಮಸ್ಕಾರಗಳು ಎಂದು ಮೋದಿ ಕನ್ನಡಲ್ಲೇ ಹೇಳಿದರು. ಇದಕ್ಕೆ ಕಾರ್ಯಕರ್ತರು ಘೋಷಣೆ ಕೂಗಿದರು.

ಕಾಂಗ್ರೆಸ್ ಸರ್ಕಾರದ ವಿರುದ್ಧ ಜನರಲ್ಲಿ ಆಕ್ರೋಶವಿದೆ.  ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ವಿದಾಯ ಹೇಳಲು ಜನ ಉತ್ಸುಕರಾಗಿದ್ದಾರೆ ಎಂದು ಮೋದಿ, ನಮ್ಮ ಸಮಸ್ಯೆಗಳಿಗೆ ಕಾಂಗ್ರೆಸ್‌ ಸಂಸ್ಕೃತಿ ಕಾರಣ ಎಂದು ಕೇಂದ್ರ ಸರ್ಕಾರದ ವಿರುದ್ಧವೂ ಆಪಾದಿಸಿದರು.

ದೇಶದ ಭಾಗ್ಯ ಬದಲಾಗಬೇಕಾದರೆ, ದೇಶದ ಪ್ರತಿ ಹಳ್ಳಿ ಹಾಗೂ ರೈತರ ಬದುಕು ಬದಲಾಗಬೇಕು ಎಂದು ಅವರು ಆಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT