ತಡರಾತ್ರಿ ಮುಂಬೈ ತಲುಪಲಿರುವ ಶ್ರೀದೇವಿ ಪಾರ್ಥೀವ ಶರೀರ

7
ಪ್ರಕರಣ ಮುಕ್ತಾಯಗೊಳಿಸಿದ ದುಬೈ ಸರ್ಕಾರ

ತಡರಾತ್ರಿ ಮುಂಬೈ ತಲುಪಲಿರುವ ಶ್ರೀದೇವಿ ಪಾರ್ಥೀವ ಶರೀರ

Published:
Updated:
ತಡರಾತ್ರಿ ಮುಂಬೈ ತಲುಪಲಿರುವ ಶ್ರೀದೇವಿ ಪಾರ್ಥೀವ ಶರೀರ

ಮುಂಬೈ: ಬಹುಭಾಷಾ ನಟಿ ಶ್ರೀದೇವಿ ಅವರ ಪಾರ್ಥಿವ ಶರೀರ ಮಂಗಳವಾರ ತಡರಾತ್ರಿ ಮುಂಬೈ ವಿಮಾನ ನಿಲ್ದಾಣ ತಲುಪಲಿದೆ.

ಎರಡು ದಿನಗಳ ಹಿಂದೆ ದುಬೈ ಹೋಟೆಲ್‌ವೊಂದರಲ್ಲಿ ಮೃತಪಟ್ಟ ಶ್ರೀದೇವಿ ಅವರ ಸಾವಿನ ಬಗ್ಗೆ ತನಿಖೆ ಕೈಗೊಂಡ ದುಬೈ ಸರ್ಕಾರ ಅವರ ಸಾವು ಆಕಸ್ಮಿಕವಾದುದು ಎಂದು ಹೇಳಿದ್ದು, ಪ್ರಕರಣವನ್ನು ಮುಕ್ತಾಯಗೊಳಿಸಿ ಮೃತದೇಹವನ್ನು ಕುಟುಂಬಸ್ಥರಿಗೆ ನೀಡಿದೆ. 

ಭಾರತಕ್ಕೆ ಕೊಂಡೊಯ್ಯಲು ಬೇಕಿದ್ದ ಅನುಮತಿ ಪತ್ರಗಳನ್ನು ನೀಡಿದ ದುಬೈ ಪೊಲೀಸರು ಜೆಟ್‌ ವಿಮಾನದ ಮೂಲಕ ಪಾರ್ಥಿವ ಶರೀರವನ್ನು ಮುಂಬೈಗೆ ಕಳುಹಿಸಿಕೊಟ್ಟಿದೆ. 

ಶ್ರೀದೇವಿ ಪತಿ ಬೋನಿ ಕಪೂರ್ ಹಾಗೂ ಮಗ ಅರ್ಜುನ್ ಕಪೂರ್ ದುಃಖತಪ್ತರಾಗಿದ್ದಾರೆ. ಅಂತ್ಯಸಂಸ್ಕಾರಕ್ಕೆ ಬೇಕಾದ ಸಿದ್ಧತೆಗಳನ್ನು ಕುಟುಂಬ ಮಾಡಿಕೊಂಡಿದ್ದು, ಬುಧವಾರ ಮುಂಬೈನಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ. 

ಸಾವಿನ ಪ್ರಕರಣ ಸಂಬಂಧದ ಎಲ್ಲಾ ತನಿಖೆಗಳು ಸಂಪೂರ್ಣವಾಗಿ ಮುಕ್ತಾಯಗೊಂಡಿದೆ. ಶ್ರೀದೇವಿ ಅವರು ಆಕಸ್ಮಿಕವಾಗಿ ಸ್ನಾನದ ತೊಟ್ಟಿಯಲ್ಲಿ ಬಿದ್ದು ಮೃತಪಟ್ಟಿದ್ದಾರೆ ಎಂದು ತನಿಖೆಯಿಂದ ದೃಢಪಟ್ಟಿದೆ. ಆದ ಕಾರಣ ಮೃತದೇಹವನ್ನು ಸಂಬಂಧಿಗಳಿಗೆ ಹಸ್ತಾಂತರಿಸಲಾಗಿದೆ ಎಂದು ದುಬೈ ವಕೀಲರು ತಿಳಿಸಿದ್ದಾರೆ.

ಇದನ್ನೂ ಓದಿ...

ಶ್ರೀದೇವಿ ಅಸಂತೃಪ್ತ ಮಹಿಳೆ: ಅಭಿಮಾನಿಗಳಿಗೆ ರಾಮ್‌ ಗೋಪಾಲ್ ವರ್ಮಾ ಬಹಿರಂಗ ಪತ್ರ

ನಟಿ ಶ್ರೀದೇವಿ ಅವರನ್ನು ಹತ್ಯೆ ಮಾಡಿರಬಹುದು: ಸುಬ್ರಹ್ಮಣ್ಯ ಸ್ವಾಮಿ ಸಂಶಯ ?

ಶ್ರೀದೇವಿ ಪಾರ್ಥಿವ ಶರೀರ ಹಸ್ತಾಂತರಕ್ಕೆ ನಿರಾಕ್ಷೇಪಣಾ ಪತ್ರ ನೀಡಿದ ದುಬೈ ಸರ್ಕಾರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry