ಮೊಸರನ್ನ ಅಂದ್ರೆ ಇಷ್ಟ

7

ಮೊಸರನ್ನ ಅಂದ್ರೆ ಇಷ್ಟ

Published:
Updated:
ಮೊಸರನ್ನ ಅಂದ್ರೆ ಇಷ್ಟ

ಸಿನಿಮಾ ಇರಲಿ, ಇಲ್ಲದಿರಲಿ ನಟ, ನಟಿಯರು ವರ್ಷಪೂರ್ತಿ ಡಯೆಟ್‌, ಫಿಟ್‌ನೆಸ್‌ಗೆ ಪ್ರಾಮುಖ್ಯ ನೀಡುತ್ತಾರೆ. ಆದರೆ ಹಿತಾ ಚಂದ್ರಶೇಖರ್‌ ಕೊಂಚ ಭಿನ್ನ. ಸಿನಿಮಾ ಒಪ್ಪಿಕೊಂಡಾಗಲಷ್ಟೇ ಕಟ್ಟುನಿಟ್ಟಿನ ಡಯೆಟ್‌ ಮಾಡುತ್ತಾರೆ. ಉಳಿದ ದಿನಗಳಲ್ಲಿ ತಮ್ಮ ಇಷ್ಟದ ಆಹಾರ, ತಿಂಡಿಗಳನ್ನು ತೂಕ ಹೆಚ್ಚಾಗಬಹುದು ಎಂಬ ಚಿಂತೆ ಇಲ್ಲದೇ ತಿನ್ನುತ್ತಾರೆ. ‘ನನ್ನ ದೇಹಸಿರಿಯೇ ಹಾಗಿದೆ. ತಿಂದರೂ ಹೆಚ್ಚು ದಪ್ಪಗಾಗಲ್ಲ’ ಎಂಬ ಮಾತು ಅವರದು.

ಕೆಲ ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ಹಿತಾ, ಸಿನಿಮಾ ಇದ್ದಾಗಲಷ್ಟೇ ಕಟ್ಟುನಿಟ್ಟಾಗಿ ಡಯೆಟ್‌, ಫಿಟ್‌ನೆಸ್‌ಗೆ ಕಸರತ್ತು ಮಾಡುತ್ತಾರೆ. ದೇಹದ ತೂಕ ಸ್ವಲ್ಪ ಹೆಚ್ಚು ಕಡಿಮೆಯಾದರೂ ಅದು ಕ್ಯಾಮೆರಾದಲ್ಲಿ ಗೊತ್ತಾಗುತ್ತದೆ. ಅದಕ್ಕೆ ಸಿನಿಮಾ ಇದ್ದಾಗ  ಡಯೆಟ್‌ ಮಾಡುತ್ತೇನೆ’ ಎಂದು ಸಿನಿಮಾ ಪ್ರೀತಿಯನ್ನು ಹಂಚಿಕೊಳ್ಳುತ್ತಾರೆ.

‘ಸಿನಿಮಾ ಬಗ್ಗೆ ಆರೇಳು ತಿಂಗಳ ಹಿಂದೆಯೇ ಮಾತುಕತೆ ನಡೆಯುತ್ತದೆ. ಅಲ್ಲಿಂದ ಸಿನಿಮಾದ ಪಾತ್ರಕ್ಕೆ ಹೇಗೆ ಬೇಕೋ ಹಾಗೇ ಪಥ್ಯ ಮಾಡಲು ಆರಂಭಿಸುತ್ತೇನೆ. ಸಾಮಾನ್ಯವಾಗಿ ಮೂರು ತಿಂಗಳ ಡಯೆಟ್‌ ಮಾಡುತ್ತೇನೆ. ಪ್ರಾಜೆಕ್ಟ್‌ ಒಪ್ಪಿಕೊಂಡ ಬಳಿಕ ಜಿಮ್‌ನಲ್ಲಿ ವರ್ಕೌಟ್‌ ಮಾಡಲು ಆರಂಭಿಸುತ್ತೇನೆ. ಹಾಗಂತ ಜಿಮ್‌ಗೆ ಹೋಗಿ ತೀರಾ ಕಷ್ಟಪಡುವುದಿಲ್ಲ. ಸೈಕ್ಲಿಂಗ್‌, ರನ್ನಿಂಗ್‌ ಹಾಗೂ ಸರಳವಾದ ಕಸರತ್ತು ಮಾಡುತ್ತೇನೆ ಅಷ್ಟೇ’ ಎನ್ನುತ್ತಾರೆ ಹಿತಾ.

ಡಯೆಟ್‌ ಮಾಡುವಾಗ ಅನ್ನ ತಿನ್ನುವುದಿಲ್ಲ. ಚಪಾತಿ, ಜ್ಯೂಸ್‌, ಸ್ಮೂತಿಗಳನ್ನು ಜಾಸ್ತಿ ತಿನ್ನುತ್ತಾರಂತೆ ಇವರು.

‘ನಾನು ಒಂದು ತಿಂಗಳಲ್ಲಿ 21 ದಿನ ಡಯೆಟ್‌ ಮಾಡುತ್ತೇನೆ. ಉಳಿದ 9 ದಿನ ನನಗೇನಿಷ್ಟವೋ ಅದನ್ನೆಲ್ಲಾ ತಿನ್ನುತ್ತೇನೆ. ಪಾನಿಪೂರಿ, ಬಿರಿಯಾನಿ ಎಂದರೆ ನನಗೆ ತುಂಬಾ ಇಷ್ಟ. ಹಾಗೆಯೇ ಮೊಸರನ್ನ ಎಂದರೆ ಪ್ರಾಣ. ಮಧ್ಯರಾತ್ರಿ ಎಬ್ಬಿಸಿ, ಮೊಸರನ್ನ ಕೊಟ್ಟರೂ ಗಬಗಬ ಎಂದು ತಿಂದು ಮುಗಿಸುತ್ತೇನೆ’ ಎನ್ನುತ್ತಾರೆ ಇವರು.

ಬೆಳಿಗ್ಗೆ ಓಟ್ಸ್‌, ಸಲಾಡ್‌, ಮಧ್ಯಾಹ್ನ ಚಪಾತಿ, ಪಲ್ಯ, ರಾತ್ರಿ ಊಟಕ್ಕೆ ಚಪಾತಿ, ಹಣ್ಣುಗಳನ್ನು ತಿನ್ನುತ್ತಾರೆ. ‘ಹೆಚ್ಚು ಕೊಬ್ಬು ಇರುವ ಪದಾರ್ಥಗಳನ್ನು ಡಯೆಟ್‌ ಮಾಡುವ ಸಮಯದಲ್ಲಿ ಮುಟ್ಟುವುದಿಲ್ಲ. ಮೈ ದಂಡಿಸಿ ಉಪವಾಸ ಮಾಡುವುದಿಲ್ಲ’ ಎಂಬ ವಿವರಣೆ ಇವರದು. ಕೊಬ್ಬಿನಂಶ ಕಡಿಮೆ ಇರುವ ಹಾಲು, ಟೋಸ್ಟ್‌, ಪ್ರೊಟೀನ್‌ ಜ್ಯೂಸ್‌ಗಳು, ಹಣ್ಣುಗಳು, ರೋಟಿ, ಹಸಿ ತರಕಾರಿಗಳು, ಬಾದಾಮಿ ಇವರ ಡಯೆಟ್‌ ಪಟ್ಟಿಯಲ್ಲಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry