ದೂರ ಶಿಕ್ಷಣ: ಅರ್ಜಿ ತಿರಸ್ಕೃತ

7

ದೂರ ಶಿಕ್ಷಣ: ಅರ್ಜಿ ತಿರಸ್ಕೃತ

Published:
Updated:

ಮೈಸೂರು: 2018–19ನೇ ಶೈಕ್ಷಣಿಕ ಸಾಲಿನಲ್ಲಿ ದೂರ ಶಿಕ್ಷಣ ಕೋರ್ಸ್‌ ಆರಂಭಿಸಲು ಮೈಸೂರು ವಿಶ್ವವಿದ್ಯಾಲಯ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಸೇರಿದಂತೆ ಉನ್ನತ ಶಿಕ್ಷಣ ಸಂಸ್ಥೆಗಳು ಸಲ್ಲಿಸಿದ್ದ ಅರ್ಜಿಯನ್ನು ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ತಿರಸ್ಕರಿಸಿದೆ.

‘ಯುಜಿಸಿ (ಮುಕ್ತ ಹಾಗೂ ದೂರ ಶಿಕ್ಷಣ)–2017ರ ಕಾಯ್ದೆಗೆ ತಿದ್ದುಪಡಿ ತರಲಾಗುತ್ತಿದೆ. ಹೀಗಾಗಿ, ಹೊಸ ನಿಯಮಗಳ ಅನ್ವಯ ಅರ್ಜಿ ಸಲ್ಲಿಸಬೇಕಿದೆ. ಅಧಿಸೂಚನೆ ಪ್ರಕಟಿಸಿದ ಬಳಿಕ ಪ್ರಕ್ರಿಯೆ ಶುರುವಾಗಲಿದೆ. ಅದಕ್ಕಾಗಿ ಕಾಯುತ್ತಿದ್ದೇವೆ’ ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಮೂಲಗಳು ತಿಳಿಸಿವೆ.

ದೂರಶಿಕ್ಷಣಕ್ಕೆ ಮಾನ್ಯತೆ ನೀಡುವಂತೆ 2017ರ ಕಾಯ್ದೆಯ ಅನುಸಾರವಾಗಿ ಕೆಎಸ್ಒಯು ರಾಜ್ಯದ ವಿ.ವಿ.ಗಳ ಪೈಕಿ ಮೊದಲ ಬಾರಿಗೆ ಯುಜಿಸಿಗೆ ಅರ್ಜಿ ಸಲ್ಲಿಸಿತ್ತು. ನಂತರ, ಮೈಸೂರು ವಿ.ವಿ ಸೇರಿದಂತೆ ಇತರ ವಿ.ವಿ.ಗಳೂ ಅರ್ಜಿ ಸಲ್ಲಿಸಿದ್ದವು. ಯುಜಿಸಿಯು ಇದೀಗ ಕಾಯ್ದೆಗೆ ತಿದ್ದುಪಡಿ ತರುವುದಾಗಿ ತಿಳಿಸಿದ್ದು, ಅರ್ಜಿಗಳನ್ನು ತಿರಸ್ಕರಿಸಿದೆ. ಎಲ್ಲ ವಿ.ವಿ.ಗಳು ಹೊಸತಾಗಿ ಅರ್ಜಿ ಸಲ್ಲಿಸಲು ಕಾಯುತ್ತಿವೆ.

ದೂರಶಿಕ್ಷಣವನ್ನು ನೀಡುವ ದೇಶದ ಎಲ್ಲ ವಿಶ್ವವಿದ್ಯಾಲಯಗಳಿಗೆ ಇದು ಅನ್ವಯಿಸುತ್ತದೆ ಎಂದು ವಿ.ವಿ ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry