ವಿಜಯಶಂಕರಗೆ ಬಿಎಚ್‌ಶ್ರೀ ಪ್ರಶಸ್ತಿ

7

ವಿಜಯಶಂಕರಗೆ ಬಿಎಚ್‌ಶ್ರೀ ಪ್ರಶಸ್ತಿ

Published:
Updated:
ವಿಜಯಶಂಕರಗೆ ಬಿಎಚ್‌ಶ್ರೀ ಪ್ರಶಸ್ತಿ

ಶಿರಸಿ: ಇಲ್ಲಿನ ಬಿ.ಎಚ್.ಶ್ರೀಧರ ಸಾಹಿತ್ಯ ಪ್ರಶಸ್ತಿ ಸಮಿತಿಯು, ಸಾಹಿತಿ ಬಿ.ಎಚ್‌.ಶ್ರೀಧರರ ಹೆಸರಿನಲ್ಲಿ ನೀಡುವ ವಾರ್ಷಿಕ ಪ್ರಶಸ್ತಿಗೆ ವಿಮರ್ಶಕ ಎಸ್.ಆರ್. ವಿಜಯಶಂಕರ ಆಯ್ಕೆಯಾಗಿದ್ದಾರೆ.

ಪ್ರಶಸ್ತಿಯು ₹ 5,000 ನಗದು, ಪ್ರಶಸ್ತಿ ಪತ್ರ ಹಾಗೂ ಫಲಕವನ್ನು ಒಳಗೊಂಡಿದೆ.

ದಕ್ಷಿಣ ಕನ್ನಡ ಜಿಲ್ಲೆ ವಿಟ್ಲ ಗ್ರಾಮದ ವಿಜಯಶಂಕರ ಅವರು ಪ್ರಸ್ತುತ ಬೆಂಗಳೂರಿನಲ್ಲಿದ್ದಾರೆ. ‘ಮನೋಗತ’, ‘ಒಳದನಿ’, ‘ಪ್ರತಿಮಾಲೋಕ’ ಅವರ ವಿಮರ್ಶಾ ಕೃತಿಗಳು. ‘ಒಡನಾಟ’ ವ್ಯಕ್ತಿ ಚಿತ್ರಣದ ಬರಹ. ವಿಮರ್ಶಾ ಕ್ಷೇತ್ರದಲ್ಲಿ ಅವರು ಮಾಡಿರುವ ಸಾಧನೆ ಗಮನಿಸಿ, ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಏ.24ರಂದು ಇಲ್ಲಿ ನಡೆಯುವ ಬಿ.ಎಚ್.ಶ್ರೀಧರರ ಜನ್ಮ ಶತಮಾನೋತ್ಸವದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಸಮಿತಿಯ ಕಾರ್ಯಾಧ್ಯಕ್ಷ ರಾಜಶೇಖರ ಹೆಬ್ಬಾರ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry