ಶಿರಸಿ ಮಾರಿಕಾಂಬೆ ರಥೋತ್ಸವ ಇಂದು

7

ಶಿರಸಿ ಮಾರಿಕಾಂಬೆ ರಥೋತ್ಸವ ಇಂದು

Published:
Updated:
ಶಿರಸಿ ಮಾರಿಕಾಂಬೆ ರಥೋತ್ಸವ ಇಂದು

ಶಿರಸಿ: ಇಲ್ಲಿನ ಮಾರಿಕಾಂಬಾ ದೇವಿಯ ರಥೋತ್ಸವ ಬುಧವಾರ (ಫೆ.28) ನಡೆಯಲಿದೆ.

ಮಂಗಳವಾರ ರಾತ್ರಿ ಕಲ್ಯಾಣಿಯಾಗಿ, ಬೆಳಿಗ್ಗೆ 7.14 ಗಂಟೆಗೆ ರಥಾರೂಢಳಾಗುವ ದೇವಿ ಶೋಭಾಯಾತ್ರೆಯಲ್ಲಿ ಸಾಗಿ, ದೇವಾಲಯದಿಂದ ಅರ್ಧ ಕಿ.ಮೀ ದೂರದಲ್ಲಿರುವ ಬಿಡಕಿಬೈಲಿನ ಜಾತ್ರಾ ಗದ್ದುಗೆಯಲ್ಲಿ ಆಸೀನಳಾಗುವಳು.

ನಾಡಿನಾದ್ಯಂತ ಅಸಂಖ್ಯ ಭಕ್ತರನ್ನು ಹೊಂದಿರುವ ದೇವಿಯ ರಥೋತ್ಸವವನ್ನು ಕಣ್ತುಂಬಿಕೊಳ್ಳಲು ಹಾವೇರಿ, ಹಾನಗಲ್ ಭಾಗಗಳ ಸಹಸ್ರಾರು ಲಂಬಾಣಿಗರು ದೇವಾಲಯದಲ್ಲಿ ಬೀಡುಬಿಟ್ಟಿದ್ದಾರೆ.

ಮಾರ್ಚ್‌ 1ರಂದು ಬೆಳಿಗ್ಗೆ 5 ಗಂಟೆಯಿಂದ ಜಾತ್ರಾ ಗದ್ದುಗೆಯಲ್ಲಿ ದೇವಿಗೆ ಹಣ್ಣು–ಕಾಯಿ, ಉಡಿ, ಹರಕೆ ಸೇವೆಗಳು, ಮರ್ಕಿ–ದುರ್ಗಿ ದೇವಾಲಯದಲ್ಲಿ ಬೆಳಿಗ್ಗೆ 6ರಿಂದ ಬೇವಿನ ಉಡುಗೆ ಸೇವೆ ಆರಂಭವಾಗುತ್ತವೆ.

ಪ್ರಾಣಿ ಬಲಿ ಇಲ್ಲದಿರುವುದೇ ಶಿರಸಿ ಮಾರಿಕಾಂಬಾ ಜಾತ್ರೆಯ ವಿಶೇಷ. ದೇವಿಯ ಪತಿ ಎನ್ನಲಾಗುವ ಪಟ್ಟದ ಕೋಣದ ಹಣೆಗೆ ಎಣ್ಣೆ ಹಾಕಿ, ಅರಿಶಿನ–ಕುಂಕುಮ ಹಚ್ಚಿ ಇಲ್ಲಿನ ಜನರು ಪೂಜಿಸುತ್ತಾರೆ. ಬೂದುಗುಂಬಳ ಕಾಯಿಯ ಸಾತ್ವಿಕ ಬಲಿ ನೀಡಿದ ನಂತರ, ರಥೋತ್ಸವ ಆರಂಭವಾಗುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry