ವಾಚ್‌ಗೆ ಅನುಮತಿ ನೀಡಿ

7

ವಾಚ್‌ಗೆ ಅನುಮತಿ ನೀಡಿ

Published:
Updated:

ಮಾರ್ಚ್ ಒಂದರಿಂದ ಪಿಯುಸಿ ಪರೀಕ್ಷೆಗಳು ಆರಂಭವಾಗಲಿವೆ. ‘ವಿದ್ಯಾರ್ಥಿಗಳು ಕೈಗಡಿಯಾರವನ್ನು ಧರಿಸಿಕೊಂಡು ಪರೀಕ್ಷಾ ಕೊಠಡಿಗೆ ಹೋಗುವಂತಿಲ್ಲ’ ಎಂದು ಕೆಲವು ಕಾಲೇಜುಗಳು ನಿರ್ದೇಶನ ನೀಡುತ್ತಿರುವುದು ಗಮನಕ್ಕೆ ಬಂದಿದೆ. ಸ್ಮಾರ್ಟ್ ವಾಚ್‍ಗಳನ್ನು ನಿಷೇಧಿಸುವುದು ಸರಿಯಾದ ಕ್ರಮ. ಆದರೆ ಮಾಮೂಲಿ ಕೈಗಡಿಯಾರಗಳನ್ನು ಸಹ ಧರಿಸಿಕೊಂಡು ಹೋಗಬಾರದು ಎನ್ನುವ ನಿಯಮವನ್ನು ಒಪ್ಪಲು ಸಾಧ್ಯವಿಲ್ಲ.

ಪರೀಕ್ಷೆಗೆ ಮುನ್ನ ಮತ್ತು ಪರೀಕ್ಷೆಯ ವೇಳೆ ವಿದ್ಯಾರ್ಥಿಗಳಿಗೆ ಸಮಯಪಾಲನೆಗೆ ಕೈಗಡಿಯಾರ ಬಹಳ ಸಹಾಯ ಮಾಡುತ್ತದೆ. ಹಾಗಾಗಿ ಅವರ ಹಿತವನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ಪರೀಕ್ಷಾ ಕೇಂದ್ರಗಳಲ್ಲಿ ಕೈಗಡಿಯಾರವನ್ನು ಧರಿಸಲು ಅನುಮತಿ ಕೊಡಬೇಕು. ಪದವಿಪೂರ್ವ ಶಿಕ್ಷಣ ಇಲಾಖೆ ಈ ಬಗ್ಗೆ ಸ್ಪಷ್ಟ ನಿರ್ದೇಶನ ನೀಡಲಿ.

-ನರೇಂದ್ರ ಎಸ್., ಗಂಗೊಳ್ಳಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry