ನಗರದಲ್ಲಿ 33 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ

7

ನಗರದಲ್ಲಿ 33 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ

Published:
Updated:

ಬೆಂಗಳೂರು: ನಗರದಲ್ಲಿ ಮಂಗಳವಾರ 33 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿದೆ. ಈ ವರ್ಷದ ಗರಿಷ್ಠ ತಾಪಮಾನವಿದು.

ಹವಾಮಾನ ತಜ್ಞರ ಪ್ರಕಾರ ಈ ಬೇಸಿಗೆಯಲ್ಲಿ ಉಷ್ಣಾಂಶ ಏರುಮುಖವಾಗಿಯೇ ಸಾಗಲಿದೆ. ಮೋಡಕವಿದ ವಾತಾವರಣವಿರುವ ದಿನಗಳಲ್ಲಿ ಮಾತ್ರ ಕಡಿಮೆ ಆಗಲಿದೆ.

2016ರ ಫೆ 23ರಂದು ಹಾಗೂ 2017ರ ಫೆಬ್ರುವರಿ 25ರಂದು ನಗರದಲ್ಲಿ 35.5 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿತ್ತು. ಫೆಬ್ರುವರಿ ತಿಂಗಳಲ್ಲಿ ಇದುವರೆಗೆ ದಾಖಲಾದ ಗರಿಷ್ಠ ತಾಪಮಾನವಿದು. 2015ರ ಫೆ. 28ರಂದು 33.6 ಡಿಗ್ರಿ ದಾಖಲಾಗಿತ್ತು.

‘ಉಷ್ಣಾಂಶ 1 ಡಿಗ್ರಿಯಷ್ಟು ಹೆಚ್ಚಳವಾಗಿದೆ. ವಾತಾವರಣದಲ್ಲಿ ತೇವಾಂಶ ಕಡಿಮೆ ಇರುವುದರಿಂದ ಜನರಿಗೆ ಸೆಕೆಯ ಅನುಭವ ಆಗುತ್ತಿದೆ. ಚಳಿಗಾಲ ಹೋಗಿ ಬೇಸಿಗೆ ಆರಂಭವಾಗುವ ಸಂಕ್ರಮಣ ಕಾಲವಿದು. ಬೆಳಗಿನ ವಾತಾವರಣ ತಂಪಿನಿಂದ ಕೂಡಿದ್ದು, ಹೊತ್ತೇರಿದಂತೆಯೇ ತಾಪಮಾನ ಹೆಚ್ಚುತ್ತದೆ. ಹಾಗಾಗಿ ಜನರಿಗೆ ಹೆಚ್ಚು ಸೆಕೆ ಇರುವಂತೆ ಭಾಸವಾಗುತ್ತದೆ’ ಎಂದು ಹವಾಮಾನ ಇಲಾಖೆಯ ಬೆಂಗಳೂರು ಕೇಂದ್ರದ ನಿರ್ದೇಶಕ ಸುಂದರ ಎಂ. ಮೇತ್ರಿ ತಿಳಿಸಿದರು.

ದೀರ್ಘ ಚಳಿಗಾಲವಿದ್ದಾಗ ಬೇಸಿಗೆಯೂ ದೀರ್ಘವಾಗಿರುತ್ತದೆ. ರಾಜ್ಯದಾದ್ಯಂತ ಮುಂಬರುವ ದಿನಗಳು ಇನ್ನೂ ಹೆಚ್ಚು ಉಷ್ಣಾಂಶದಿಂದ ಕೂಡಿರಲಿವೆ. ಮಾರ್ಚ್‌ ಎರಡನೇ ವಾರದ ನಂತರ ತಾಪಮಾನ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದರು.

ಫೆಬ್ರುವರಿ ತಿಂಗಳ ಗರಿಷ್ಠ ಉಷ್ಣಾಂಶದ ವಿವರ

ದಿನಾಂಕ, ಉಷ್ಣಾಂಶ (ಡಿಗ್ರಿ ಸೆಲ್ಸಿಯಸ್‌ನಲ್ಲಿ)

20, 31.5

21, 31.5

22, 32.4

23, 31.2

24, 31.2

25, 32

26, 32.7

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry