ಫುಟ್‌ಬಾಲ್‌: ಉಸೇನ್‌ ಬೋಲ್ಟ್‌ ರಾಬಿ ವಿಲಿಯಮ್ಸ್‌ ಮುಖಾಮುಖಿ

7

ಫುಟ್‌ಬಾಲ್‌: ಉಸೇನ್‌ ಬೋಲ್ಟ್‌ ರಾಬಿ ವಿಲಿಯಮ್ಸ್‌ ಮುಖಾಮುಖಿ

Published:
Updated:
ಫುಟ್‌ಬಾಲ್‌: ಉಸೇನ್‌ ಬೋಲ್ಟ್‌ ರಾಬಿ ವಿಲಿಯಮ್ಸ್‌ ಮುಖಾಮುಖಿ

ಪ್ಯಾರಿಸ್‌ (ಎಎಫ್‌ಪಿ): ಜಮೈಕಾದ ಉಸೇನ್ ಬೋಲ್ಟ್ ಫುಟ್‌ಬಾಲ್ ಅಂಗಣಕ್ಕೆ ಇಳಿಯಲು ಸಜ್ಜಾಗಿದ್ದಾರೆ. ಬ್ರಿಟಿಷ್‌ ಪಾಪ್ ಗಾಯಕ ರಾಬಿ ವಿಲಿಯಮ್ಸ್‌ ಒಳಗೊಂಡಿರುವ ತಂಡದ ವಿರುದ್ಧದ ಪಂದ್ಯದಲ್ಲಿ ಅವರು ಆಡುವುದು ಖಚಿತವಾಗಿದೆ.

ಫುಟ್‌ಬಾಲ್ ಕ್ಲಬ್‌ ಒಂದರ ಜೊತೆ ಬೋಲ್ಟ್ ಒಪ್ಪಂದ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಸೋಮವಾರ ಹರಿದಾಡಿತ್ತು. ಆದರೆ  ಈ ಸಂಗತಿಯನ್ನು ಅವರು ನಿರಾಕರಿಸಿದ್ದಾರೆ. ಬೋಲ್ಟ್‌ ಮ್ಯಾಂಚೆಸ್ಟರ್‌ ಯುನೈಟೆಡ್‌ನ ಓಲ್ಡ್‌ ಟ್ರಾಫರ್ಡ್‌ ಕ್ರೀಡಾಂಗಣದಲ್ಲಿ ನಡೆಯುವ ಸಹಾಯಾರ್ಥ ಪಂದ್ಯದಲ್ಲಿ ಆಡುವುದಾಗಿ ತಿಳಿಸಿದ್ದಾರೆ. ಯುನಿಸೆಫ್‌ನ ಮಕ್ಕಳ ನೆರವಿನ ನಿಧಿಗಾಗಿ ಈ ಪಂದ್ಯ ನಡೆಯಲಿದೆ ಎಂದು ಅವರು  ತಿಳಿಸಿದ್ದಾರೆ.

ಸಾಕರ್‌ ಏಡ್‌ ವರ್ಲ್ಸ್‌ ಇಲೆವನ್ ಎಂಬ ಸಂಸ್ಥೆಯು ಈ ಪಂದ್ಯವನ್ನು ಆಯೋಜಿಸಿದ್ದು ಇಂಗ್ಲೆಂಡ್‌ನ ತಂಡವನ್ನು ವಿಲಿಯಮ್ಸ್ ಮುನ್ನಡೆಸಲಿದ್ದು ಬೋಲ್ಟ್ ಕೂಡ ತಮ್ಮ ತಂಡದ ನಾಯಕ ಆಗಿರುವರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry