ರೈತರಿಗಾಗಿ ಕೇಂದ್ರ ಸರ್ಕಾರ ಏನು ಮಾಡಿದೆ?

7

ರೈತರಿಗಾಗಿ ಕೇಂದ್ರ ಸರ್ಕಾರ ಏನು ಮಾಡಿದೆ?

Published:
Updated:
ರೈತರಿಗಾಗಿ ಕೇಂದ್ರ ಸರ್ಕಾರ ಏನು ಮಾಡಿದೆ?

ಅಮಿತ್‌ ಶಾ ಅವರು ಕರ್ನಾಟಕಕ್ಕೆ ಹೋಗಿ ನಿರ್ಭೀತಿಯಿಂದ ಸುಳ್ಳುಗಳನ್ನು ಹೇಳುವುದರ ಬದಲು, ನಾಲ್ಕು ವರ್ಷಗಳಲ್ಲಿ ರೈತರಿಗಾಗಿ ಕೇಂದ್ರ ಸರ್ಕಾರ ಏನು ಮಾಡಿದೆ ಎಂದು ಆತ್ಮಸಾಕ್ಷಿಯಿಂದ ಮೋದಿಯವರನ್ನು ಕೇಳಲಿ.

–ಅಶೋಕ್‌ ಗೆಹ್ಲೋಟ್‌, ಎಐಸಿಸಿ ಪ್ರಧಾನ ಕಾರ್ಯದರ್ಶಿ

ಮಹದಾಯಿ ನದಿಯ ಒಂದು ಹನಿ ನೀರನ್ನೂ ಕರ್ನಾಟಕಕ್ಕೆ ಕೊಡುವುದಿಲ್ಲ ಎಂದು ಸೋನಿಯಾ ಗಾಂಧಿ ಗೋವಾದಲ್ಲಿ ಘೋಷಿಸಿದ್ದರು. ಕಾಂಗ್ರೆಸ್‌ ಸರ್ಕಾರ, ಮಹದಾಯಿ ನ್ಯಾಯಮಂಡಳಿ ಸ್ಥಾಪಿಸಿದೆ. ಸಿದ್ದರಾಮಯ್ಯ ಅವರು ಗೋವಾ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಬಿಕ್ಕಟ್ಟು ಪರಿಹರಿಸಲು ಮನಸ್ಸು ಮಾಡಿಲ್ಲ. ಇದಕ್ಕೆ ಪರಿಹಾರ ಕಂಡುಕೊಳ್ಳಲು #ರೈತಬಂಧು ಬಿಎಸ್‌ವೈ ಮಾತ್ರ ಪ್ರಾಮಾಣಿಕವಾಗಿ ಯತ್ನಿಸಿದ್ದರು.

–ಸಿ.ಟಿ. ರವಿ, ಬಿಜೆಪಿ ಶಾಸಕ

ಚುನಾವಣಾ ಸಮಯದಲ್ಲಷ್ಟೇ ಮೋದಿ ಮತ್ತು ರಾಹುಲ್‌ ಅವರಿಗೆ ರೈತರ ಸಮಸ್ಯೆ ಕಾಣಿಸುತ್ತಿರುವುದು ನಾಚಿಕೆಗೇಡು. ಮಹದಾಯಿ ಹೋರಾಟಗಾರರ ಮೇಲೆ ಲಾಠಿ ಪ್ರಹಾರ ನಡೆದಾಗ ನೀವೆಲ್ಲಿದ್ದಿರಿ? ಮಹದಾಯಿ ಬಗ್ಗೆ ನಿಮ್ಮ ನಿಲುವೇನು? ಈಗ ಅಧಿಕಾರದಲ್ಲಿರುವ ಎರಡೂ ಪಕ್ಷಗಳು ರೈತರ ಸಾಲ ಮನ್ನಾ ವಿಚಾರದಲ್ಲಿ ಏನು ಮಾಡಿವೆ? ಆದರೂ, ಯಾವುದೇ ಮಾನ ಮರ್ಯಾದೆ ಇಲ್ಲದೆ ಮತ ಭಿಕ್ಷೆ ಕೇಳಲು ಕರ್ನಾಟಕಕ್ಕೆ ಬಂದಿದ್ದೀರಿ.

–ಸುನಿಲ್‌ ಗೌಡ ಎಸ್‌.ಎನ್‌. ‏@SNGowda4492

ಇಷ್ಟು ದಿನ ಬರದ ಮೋದಿ, ರಾಹುಲ್, ಶಾಗೆ ಚುನಾವಣೆ ಸನಿಹ ಬಂದಾಗ ಕನ್ನಡಿಗರು, ಕನ್ನಡ ಭಾಷೆ, ಕನ್ನಡ ನಾಡು ನೆನಪಾಗ್ತಿದೆ... ಒಬ್ಬರಿಗಿಂತ ಒಬ್ಬರು ಮೇಲೆ ಬಿದ್ದು ತಮ್ಮ ಭಾಷಣದಲ್ಲಿ ಕನ್ನಡವನ್ನು ಉಪಯೋಗಿಸುತ್ತಿದ್ದಾರೆ... ಇವೆಲ್ಲಾ ನಮ್ಮ ನಿಮ್ಮ ಮತಕ್ಕಾಗಿ ಅಷ್ಟೆ. ಒಂದು ವೇಳೆ ಗೆದ್ದಲ್ಲಿ ಇವರು ಪುನಃ ಬರುವುದು ಮುಂದಿನ ಐದನೇ ವರ್ಷಕ್ಕೆ...

–ವಿಕ್ರಮ್ @SwitchtoTejaswi

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry