ರಾಜ್ಯಸಭೆ ಚುನಾವಣೆಗೆ ಕಾಂಗ್ರೆಸ್‌ನಲ್ಲಿ ಹೆಚ್ಚಿದ ಲಾಬಿ

7

ರಾಜ್ಯಸಭೆ ಚುನಾವಣೆಗೆ ಕಾಂಗ್ರೆಸ್‌ನಲ್ಲಿ ಹೆಚ್ಚಿದ ಲಾಬಿ

Published:
Updated:

ಬೆಂಗಳೂರು: ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಮಾ.23ರಂದು ನಡೆಯುವ ಚುನಾವಣೆಗೆ ಕಾಂಗ್ರೆಸ್‌ನಲ್ಲಿ ತೀವ್ರ ಲಾಬಿ ಆರಂಭವಾಗಿದೆ.

ರಾಜ್ಯಸಭೆ ಸದಸ್ಯ ರೆಹಮಾನ್ ಖಾನ್, ಶಾಸಕರಾದ ಎ.ಬಿ. ಮಾಲಕರೆಡ್ಡಿ, ಶಾಮನೂರು ಶಿವಶಂಕರಪ್ಪ ಸೇರಿದಂತೆ ಘಟಾನುಘಟಿಗಳು ಪೈಪೋಟಿ ನಡೆಸುತ್ತಿದ್ದಾರೆ. ಅಲ್ಲದೆ, ಸಚಿವ ರೋಷನ್ ಬೇಗ್, ಸಲೀಂ ಅಹಮದ್, ನಜೀರ್ ಅಹಮದ್, ಮಾಜಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲರ ಪುತ್ರ ಕೈಲಾಸ

ನಾಥ ಪಾಟೀಲ, ಮುಖ್ಯಮಂತ್ರಿ ಆಪ್ತ ಚನ್ನಾರೆಡ್ಡಿ ಅವರೂ ರಾಜ್ಯಸಭೆ ಪ್ರವೇಶಿಸಲು ಆಸಕ್ತಿ ತೋರಿದ್ದಾರೆ.

ಶಿವಾಜಿನಗರದಿಂದ ಆಯ್ಕೆಯಾಗಿರುವ ರೋಷನ್ ಬೇಗ್, ಈ ಕ್ಷೇತ್ರದಿಂದ ತಮ್ಮ ಪುತ್ರನನ್ನು ಕಣಕ್ಕಿಳಿ

ಸಲು ಉದ್ದೇಶಿಸಿದ್ದಾರೆ. ಲಿಂಗಾಯತ ಸಮುದಾಯದ ಹಿರಿಯ ನಾಯಕರದ ಮಾಲಕರೆಡ್ಡಿ ರಾಜ್ಯಸಭೆಗೆ ಟಿಕೆಟ್ ಕೊಡದಿದ್ದರೆ ಕಾಂಗ್ರೆಸ್ ತೊರೆಯುವುದಾಗಿ ಎಚ್ಚರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸದ್ಯದಲ್ಲೆ ನಿವೃತ್ತಿಯಾಗಲಿರುವ ರೆಹಮಾನ್ ಖಾನ್, ಬಸವರಾಜ ಪಾಟೀಲ ಸೇಡಂ, ರಂಗಸಾಯಿ ರಾಮಕೃಷ್ಣ ಮತ್ತು ರಾಜೀವ್ ಚಂದ್ರಶೇಖರ್ ಅವರ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry