ಲೈಂಗಿಕ ತರಬೇತಿ ಶಿಬಿರ: ರಷ್ಯಾದ 10 ಮಂದಿ ಬಂಧನ

7

ಲೈಂಗಿಕ ತರಬೇತಿ ಶಿಬಿರ: ರಷ್ಯಾದ 10 ಮಂದಿ ಬಂಧನ

Published:
Updated:

ಬ್ಯಾಂಕಾಕ್‌ (ಎಎಫ್‌ಪಿ): ಇಲ್ಲಿನ ರೆಸಾರ್ಟ್‌ನಲ್ಲಿ ಲೈಂಗಿಕ ತರಬೇತಿ ಶಿಬಿರ ಆಯೋಜಿಸಿದ್ದ ರಷ್ಯಾದ ಹತ್ತು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರಲ್ಲಿ ರಷ್ಯಾದ 33 ಪ್ರವಾಸಿಗರು ಇದ್ದರು. ಆಯೋಜಕರು ಯಾವುದೇ ಅನುಮತಿ ಪಡೆದಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

‘ವಿಚಾರಸಂಕಿರಣ ನಡೆಸುವುದಾಗಿ ಆಯೋಜಕರು ತಿಳಿಸಿದ್ದರು. ಆದರೆ, ನಿರ್ದಿಷ್ಟವಾಗಿ ಯಾವ ವಿಷಯದ ಕುರಿತು ಎಂಬ ಮಾಹಿತಿ ನೀಡಿರಲಿಲ್ಲ’ ಎಂದು ರೆಸಾರ್ಟ್‌ನ ಆಡಳಿತ ಮಂಡಳಿ ತಿಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.

₹41 ಸಾವಿರ ಶುಲ್ಕ ನೀಡಿ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದಾಗಿ ಕೆಲವರು ಹೇಳಿದ್ದಾರೆ. ಮತ್ತೆ ಕೆಲವರು ಉಚಿತ ಎಂದಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry