‘ಮಡೆಸ್ನಾನ’ ವಿವಾದ ಸುಪ್ರೀಂ ಕೋರ್ಟಿಗೆ

7

‘ಮಡೆಸ್ನಾನ’ ವಿವಾದ ಸುಪ್ರೀಂ ಕೋರ್ಟಿಗೆ

Published:
Updated:

ಪುತ್ತೂರು: ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ‘ಮಡೆಸ್ನಾನ'ದ ಪರವಾಗಿ ಭಕ್ತರೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆಗೆ ಸ್ವೀಕರಿಸಿದೆ.

ಬಂಟ್ವಾಳ ತಾಲ್ಲೂಕಿನ ಮಾಣಿಯ ಪಾರ್ಪಜೆ ವೆಂಕಟ್ರಮಣ ಭಟ್‌ ಮಕರಂದ ಅವರು, ‘ಭಕ್ತನಾದ ನನ್ನ ಮೂಲಭೂತ ಹಕ್ಕನ್ನು ಉಳಿಸಿಕೊಡಬೇಕು’ ಎಂದು ಅರ್ಜಿಯಲ್ಲಿ ಕೇಳಿಕೊಂಡಿದ್ದಾರೆ. ಸುಪ್ರೀಂ ಕೋರ್ಟ್‍ನ 7 ನ್ಯಾಯಮೂರ್ತಿಗಳಿರುವ ಪೂರ್ಣಪೀಠ ಈ ಅರ್ಜಿಯನ್ನು ಅಂಗೀಕರಿಸಿದೆ.

‘ಮಡೆಸ್ನಾನ ನನ್ನ ಧಾರ್ಮಿಕ ನಂಬಿಕೆ. ಭಕ್ತರು ಸ್ವಯಂ ನೆಲೆಯಲ್ಲಿ ಇದನ್ನು ಆಚರಿಸುತ್ತಾರೆ. ಹೀಗಾಗಿ ಇದಕ್ಕೆ ಅವಕಾಶ ನೀಡುವಂತೆ ಕೇಳಿಕೊಳ್ಳಲಾಗಿದೆ’ ಎಂದು ವೆಂಕಟ್ರಮಣ ಭಟ್ ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry