ಭಾರತ–ನೇಪಾಳ ಸೇನೆ ಜಂಟಿ ಸಮರಾಭ್ಯಾಸ

7
ಭಯೋತ್ಪಾದನಾ ದಾಳಿ ನಿರ್ವಹಣಾ ತರಬೇತಿ

ಭಾರತ–ನೇಪಾಳ ಸೇನೆ ಜಂಟಿ ಸಮರಾಭ್ಯಾಸ

Published:
Updated:

ಕಠ್ಮಂಡು: ಭಾರತ ಹಾಗೂ ನೇಪಾಳ ಜಂಟಿಯಾಗಿ ಉತ್ತರಾಖಂಡದಲ್ಲಿ ಸಮರಾಭ್ಯಾಸ ನಡೆಸಲಿದ್ದು, ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆ, ವಿಪತ್ತು ನಿರ್ವಹಣಾ ಚಟುವಟಿಕೆಗಳ ಬಗ್ಗೆ ತರಬೇತಿ ನಡೆಯಲಿದೆ ಎಂದು ರಕ್ಷಣಾ ಸಚಿವಾಲಯದ ಮೂಲಗಳು ತಿಳಿಸಿವೆ.

ನೇಪಾಳದ ನೂತನ ರಕ್ಷಣಾ ಸಚಿವ ಈಶ್ವೋರ್‌ ಪೊಖ್ರೇಲ್‌ ಅವರು ಸೋಮವಾರ ಅಧಿಕಾರ ವಹಿಸಿಕೊಂಡ ಬಳಿಕ ಈ ಕುರಿತ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ‘ಉತ್ತರಾಖಂಡದ ಪಿತ್ರೋಗಡದಲ್ಲಿ 13ನೇ ಆವೃತ್ತಿಯ ಸಮರಾಭ್ಯಾಸ ಎರಡು ತಿಂಗಳ ಕಾಲ ನಡೆಯಲಿದೆ.

ನೇಪಾಳ ಸೇನೆ ಈಚೆಗೆ ಆಯೋಜಿಸಿದ್ದ ‘ಸೇನಾ ದಿನ‘ ಕಾರ್ಯಕ್ರಮದಲ್ಲಿ ಭಾರತೀಯ ಸೇನೆಯ ಮುಖ್ಯಸ್ಥ ಬಿಪಿನ್ ರಾವತ್‌ ಭಾಗವಹಿಸಿದ್ದ ಬೆನ್ನಲ್ಲೇ ಜಂಟಿ ಸಮರಾಭ್ಯಾಸದ ಘೋಷಣೆ ಹೊರಬಿದ್ದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry