ಸದ್ದು ಮಾಡುತ್ತಿದೆ ಥಂಡರ್‌ಬರ್ಡ್‌

7

ಸದ್ದು ಮಾಡುತ್ತಿದೆ ಥಂಡರ್‌ಬರ್ಡ್‌

Published:
Updated:
ಸದ್ದು ಮಾಡುತ್ತಿದೆ ಥಂಡರ್‌ಬರ್ಡ್‌

ರಾಯಲ್‌ ಎನ್‌ಫೀಲ್ಡ್‌ ಕಂಪನಿ ತನ್ನ ಬಹುನಿರೀಕ್ಷಿತ ಥಂಡರ್‌ಬರ್ಡ್‌ 350x ಹಾಗೂ 500x ಬೈಕ್‌ಗಳನ್ನು ಫೆ. 28ರಂದು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಮಾದರಿಯ ಬೈಕ್‌ಗಳನ್ನು ಯಾವಾಗ ಬಿಡುಗಡೆ ಮಾಡಲಾಗುತ್ತದೆ ಎಂದು ಕಾದಿದ್ದ ನಗರ ಪ್ರದೇಶದ ಗ್ರಾಹಕರು, ಈ ಬೈಕ್‌ಗಳಲ್ಲಿ ಇರಬಹುದಾದ ವಿಶೇಷಗಳ ಕುರಿತು ಸಿಕ್ಕಾಪಟ್ಟೆ ಗೂಗಲ್‌ ಮಾಡಿದ್ದರು.

ಥಂಡರ್‌ಬರ್ಡ್‌ ಸರಣಿಯ ಬೈಕ್‌ಗಳು ರೂಪ ಹಾಗೂ ಶಕ್ತಿ ಎರಡರಲ್ಲೂ ಅನನ್ಯವಾಗಿವೆ. ಬಿಳಿ, ನೀಲಿ, ಕಿತ್ತಳೆ ಮತ್ತು ಕೆಂಪು ಹೀಗೆ ಒಟ್ಟು ನಾಲ್ಕು ಬಣ್ಣಗಳಲ್ಲಿ ಲಭ್ಯವಿವೆ. ಈ ನಾಲ್ಕು ಬಣ್ಣಗಳಲ್ಲಿ ಒಂದು ಫ್ಯುಯಲ್‌ ಟ್ಯಾಂಕ್‌ನ ಮೇಲೆ ಕಾಣಿಸಿಕೊಂಡರೆ, ಎಂಜಿನ್‌ ಹಾಗೂ ಚಕ್ರಗಳು ಕಪ್ಪು ಬಣ್ಣವನ್ನು ಹೊಂದಿವೆ. ಆದರೆ, ಫ್ಯುಯಲ್‌ ಟ್ಯಾಂಕರ್‌ಗೆ ಇದುವರೆಗಿನ ಥಂಡರ್‌ಬರ್ಡ್‌ ಸರಣಿ ಬೈಕ್‌ಗಳ ಮೂಲ ವಿನ್ಯಾಸವನ್ನೇ ಉಳಿಸಿಕೊಳ್ಳಲಾಗಿದೆ. ಎರಡು ಬಣ್ಣಗಳ ಈ ಆಯ್ಕೆ ಥಂಡರ್‌ಬರ್ಡ್‌ಗೆ ಸ್ಪೋರ್ಟಿ ಲುಕ್‌ ನೀಡಿದ್ದು, ಯುವ ಗ್ರಾಹಕರನ್ನು ಆಕರ್ಷಿಸುವಂತಿದೆ. ಈ ಸರಣಿಯ ಬೈಕ್‌ಗಳ ಹ್ಯಾಂಡಲ್‌ಬಾರ್‌ ಸಹ ಅಗಲವಾಗಿದೆ. ಇದರಿಂದ ನಗರ ಪ್ರದೇಶದಲ್ಲಿ ಬೈಕ್‌ ಓಡಿಸುವುದು ಮತ್ತಷ್ಟು ಸಲೀಸಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. 500x ಬೈಕ್‌ 499 ಸಿ.ಸಿ. ಸಿಲಿಂಡರ್‌ ಎಂಜಿನ್‌ ಹೊಂದಿದ್ದು, 350x ಬೈಕ್‌ಗೆ 346 ಸಿ.ಸಿ. ಸಿಲಿಂಡರ್‌ ಎಂಜಿನ್‌ ಇದೆ. ಕಪ್ಪು ಬಣ್ಣದ ಲೋಹದ ಚಕ್ರಗಳು, ಟ್ಯೂಬ್‌ಲೆಸ್‌ ಟೈರ್‌ಗಳು, ಹಿಂಬದಿಯಲ್ಲಿ ಎಲ್‌ಇಡಿ ಬಲ್ಬ್‌ಗಳು– ಹೀಗೆ ಕೆಲವು ವಿಶೇಷಗಳನ್ನು ಈ ಸರಣಿಯ ಬೈಕ್‌ಗಳು ಹೊಂದಿವೆ.

ಥಂಡರ್‌ಬರ್ಡ್‌ 350x ಬೈಕ್‌ಗೆ ₹1.60 ಲಕ್ಷ ಹಾಗೂ 500x ಬೈಕ್‌ಗೆ ₹2 ಲಕ್ಷ ಬೆಲೆ ನಿಗದಿ ಮಾಡಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry