ಮನೆಯಲ್ಲೇ ಸವಿಯಿರಿ ಮಿಲಿಟರಿ ಹೋಟೆಲ್‌ ರುಚಿ

7

ಮನೆಯಲ್ಲೇ ಸವಿಯಿರಿ ಮಿಲಿಟರಿ ಹೋಟೆಲ್‌ ರುಚಿ

Published:
Updated:
ಮನೆಯಲ್ಲೇ ಸವಿಯಿರಿ ಮಿಲಿಟರಿ ಹೋಟೆಲ್‌ ರುಚಿ

ಮಿಲಿಟರಿ ಹೋಟೆಲ್‌ ಎಂದಾಕ್ಷಣ ಕಣ್ಣ ಮುಂದೆ ಬರುವುದು ಖಾರ ಖಾರ ಬಿರಿಯಾನಿ, ನಾಟಿ ಕೋಳಿ ಸಾರು. ನಗರದ ವಿವಿಧ ಭಾಗಗಳಲ್ಲಿ ಮಿಲಿಟರಿ ಹೋಟೆಲ್‌ಗಳಿವೆ. ಆ ಹೋಟೆಲ್‌ಗಳಲ್ಲಿನ ಖಾದ್ಯಗಳ ರುಚಿ, ನಾಟಿ ಶೈಲಿಯ ಮಾಂಸಾಹಾರವನ್ನು ತಯಾರಿಸುವ ಮಾಹಿತಿ ‘ಮಿಲಿಟರಿ ಹೋಟೆಲ್’ ಎಂಬ ಅಪ್ಲೀಕೇಷನ್‌ನಲ್ಲಿ ಲಭ್ಯ.

ಈ ಆ್ಯಪ್‌ನಲ್ಲಿ ಮಟನ್, ಕೋಳಿ, ಮೀನು, ಕಡಲ ಆಹಾರ, ಮೊಟ್ಟೆ ಖಾದ್ಯಗಳ ರೆಸಿಪಿಗಳು ಸಾಕಷ್ಟಿವೆ. ಪ್ರತಿಹಂತವನ್ನೂ ವಿವರಿಸಿರುವುದರಿಂದ ಅಡುಗೆ ಮಾಡುವವರಿಗೆ ಅನುಕೂಲ. ಮಟನ್‌ ಸಾರು, ಮಟನ್‌ ಪೆಪ್ಪರ್‌, ಕೇರಳ ಶೈಲಿಯ ಮಟನ್‌ ಬಿರಿಯಾನಿ, ಕಾಲುಸೂಪ್‌ ಹೀಗೆ ಬೇರೆ ವೈವಿಧ್ಯಮಯ ಅಡುಗೆ ಮಾಹಿತಿ ಇಲ್ಲಿದೆ. ಸಾಮಾನು, ಮಾಡುವ ವಿಧಾವನ್ನು ಸರಳ ಕನ್ನಡದಲ್ಲಿ ನೀಡಲಾಗಿದೆ.

ಗೂಗಲ್‌ ಪ್ಲೇಸ್ಟೋರ್‌ನಲ್ಲಿ ಈ ಆ್ಯಪ್‌ (Military Hotel) ಲಭ್ಯ. ಆ್ಯಪ್‌ ಮೊಬೈಲ್‌ಗೆ ಇನ್‌ಸ್ಟಾಲ್ ಮಾಡಿಕೊಳ್ಳಬೇಕು. ಓಪನ್‌ ಮಾಡಿದಾಗ ಆಹಾರದ ಆಯ್ಕೆಗಳು ತೆರೆದುಕೊಳ್ಳುತ್ತವೆ. ನಿಮಗೆ ಇಷ್ಟವಾದ ಅಡುಗೆ ಮೇಲೆ ಕ್ಲಿಕ್ಕಿಸಿದರೆ ಮಾಹಿತಿ ಸಿಗುತ್ತದೆ. ಮನೆಯಲ್ಲೇ ಇರುವ, ಸುಲಭವಾಗಿ ಲಭ್ಯವಾಗುವ ಸಾಮಗ್ರಿಗಳಿಗೆ ಹೆಚ್ಚು ಒತ್ತು ಕೊಟ್ಟಿರುವುದು ಗಮನ ಸೆಳೆಯುವ ಅಂಶ. ಒಂದು ಲಕ್ಷ ಜನರು ಡೌನ್‌ಲೋಡ್‌ ಮಾಡಿಕೊಂಡಿದ್ದಾರೆ. ಒಟ್ಟಾರೆ ರೇಟಿಂಗ್‌ 4.3 ಇದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry