11 ನಿರುಪಯುಕ್ತ ಬಸ್‌ ಭಸ್ಮ

7

11 ನಿರುಪಯುಕ್ತ ಬಸ್‌ ಭಸ್ಮ

Published:
Updated:
11 ನಿರುಪಯುಕ್ತ ಬಸ್‌ ಭಸ್ಮ

ಕಲಬುರ್ಗಿ: ಇಲ್ಲಿನ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ಕಾರ್ಯಾಗಾರ–2ರಲ್ಲಿ ಬುಧವಾರ ಮಧ್ಯಾಹ್ನ 1ರ ಸುಮಾರಿಗೆ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು, 11 ನಿರುಪಯುಕ್ತ ಬಸ್‌ಗಳು ಹಾಗೂ ನೂರಾರು ಟೈರ್‌ಗಳು ಭಸ್ಮವಾಗಿವೆ.

₹20 ಲಕ್ಷ ಹಾನಿಯಾಗಿರುವ ಅಂದಾಜಿದೆ ಎಂದು ಮೂಲಗಳು ತಿಳಿಸಿವೆ. ಈ ಕಾರ್ಯಾಗಾರ ನಗರದೊಳಗೆ ಇದೆ. ಇಡೀ ಆವರಣದಲ್ಲಿ ದಟ್ಟ ಹೊಗೆ ಆವರಿಸಿದ್ದರಿಂದ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಸುತ್ತಲಿನ ಕೆಲವರು ಭಯಭೀತರಾಗಿ ತಮ್ಮ ಮನೆಗಳ ಸಿಲಿಂಡರ್‌ಗಳನ್ನು ಬೇರೆಡೆ ಸ್ಥಳಾಂತರಿಸಿದರು. ಸ್ಥಳದಲ್ಲಿ ಜಮಾಯಿಸಿದ್ದ ಜನರನ್ನು ಚದುರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry