ಘರ್ಷಣೆಗೆ ಬೇಸತ್ತು ಸಾಮೂಹಿಕ ಬೌದ್ಧ ಧರ್ಮ ಸ್ವೀಕಾರ

7

ಘರ್ಷಣೆಗೆ ಬೇಸತ್ತು ಸಾಮೂಹಿಕ ಬೌದ್ಧ ಧರ್ಮ ಸ್ವೀಕಾರ

Published:
Updated:
ಘರ್ಷಣೆಗೆ ಬೇಸತ್ತು ಸಾಮೂಹಿಕ ಬೌದ್ಧ ಧರ್ಮ ಸ್ವೀಕಾರ

ಜೇವರ್ಗಿ (ಕಲಬುರ್ಗಿ ಜಿಲ್ಲೆ): ಗ್ರಾಮ ದೇವತೆ ಜಾತ್ರೆಯಲ್ಲಿ ನಡೆದಿದ್ದ ಘರ್ಷಣೆಯಿಂದ ಬೇಸತ್ತು ತಮ್ಮ ಮನೆಗಳಲ್ಲಿನ ದೇವರ ಫೋಟೊಗಳನ್ನು ದಹಿಸಿದ್ದ ತಾಲ್ಲೂಕು ಕೊಂಡಗೂಳಿ ಗ್ರಾಮದ ದಲಿತ ಸಮುದಾಯದವರು ಬುಧವಾರ ಹಿಂದೂ ಧರ್ಮ ತ್ಯಜಿಸಿ ಸಾಮೂಹಿಕವಾಗಿ ಬೌದ್ಧ ಧರ್ಮ ಸ್ವೀಕರಿಸಿದರು.

ಬಸವ ಕಲ್ಯಾಣದ ಬೌದ್ಧ ಬಿಕ್ಕು ದಮ್ಮನಾಗ ಹತ್ಯಾಳ, ಬಂತೇಜಿ ಸಂಘಪಾಲ ಅಣದೂರ್ ಅವರ ಮಾರ್ಗದರ್ಶನದಲ್ಲಿ ಗ್ರಾಮದ 58 ಕುಟುಂಬಗಳ ಸುಮಾರು 200 ಸದಸ್ಯರಿಗೆ ದಲಿತ ಮುಖಂಡ ವಿಠಲ್ ದೊಡಮನಿ ಬೌದ್ಧ ಧರ್ಮದ ಪ್ರತಿಜ್ಞಾ ವಿಧಿ ಬೋಧಿಸಿದರು. ಅವರಿಗೆ  ಬುದ್ಧನ ಭಾವಚಿತ್ರ ವಿತರಿಸಲಾಯಿತು.

ದಲಿತ ಮುಖಂಡರಾದ ಭೀಮರಾಯ ನಗನೂರ, ಹಣಮಂತ ಯಳಸಂಗಿ, ನಾಗೇಶ ಕೊಳ್ಳಿ, ಪತ್ರಕರ್ತೆ ರೇಣುಕಾ ಸಿಂಗೆ, ಸಂತೋಷ ಮೇಲಿನ

ಮನಿ, ಸಂಗರಾಜ್ ಮಳ್ಳಿ, ಸೋಮಶೇಖರ ಮೇಲಿನಮನಿ, ರವಿ ಕುಳಗೇರಿ, ಶ್ರೀಹರಿ ಕರಕಿಹಳ್ಳಿ, ಮಲ್ಲಣ್ಣ ಕೊಡಚಿ, ದೌಲಪ್ಪ ಮದನ್, ದೇವಿಂದ್ರ ಮುದವಾಳ, ಸಿದ್ದಪ್ಪ ಆಲೂರ್, ಮಲ್ಲಿಕಾರ್ಜುನ ಧನಕರ್  ಇದ್ದರು.

ಗ್ರಾಮ ದೇವತೆ ಮರೆಮ್ಮದೇವಿ ತೇರು ಎಳೆಯುವ ವಿಷಯಕ್ಕೆ ಸಂಬಂಧಿಸಿದಂತೆ ಫೆ.9ರಂದು ದಲಿತರು ಮತ್ತು ಸವರ್ಣಿಯರ ಮಧ್ಯೆ  ಮಾರಾಮಾರಿ ನಡೆದಿತ್ತು. ಕಲ್ಲು ತೂರಾಟ ನಡೆದು 8 ಜನ ಗಾಯಗೊಂಡಿದ್ದರು.

ದಲಿತರ ಮೇಲೆ ನಡೆದ ಈ ಹಲ್ಲೆಗೆ ‘ದೇವರು’ಗಳೇ ಕಾರಣ ಎಂದು ಅಲ್ಲಿನ ದಲಿತರು ಆಕ್ರೋಶ ವ್ಯಕದೇವರ ಫೋಟೊಗಳಿಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry