7

ಗೃಹಸಚಿವರ ಮಗಳಿಗೆ ಸುರಕ್ಷತೆ ಪಾಠ!

Published:
Updated:
ಗೃಹಸಚಿವರ ಮಗಳಿಗೆ ಸುರಕ್ಷತೆ ಪಾಠ!

ಬೆಂಗಳೂರು: ಜಯನಗರದ ಸಾರ್ವಜನಿಕ ಸ್ಥಳಗಳಲ್ಲಿ ಅಪರಾಧಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದ ಗೃಹರಕ್ಷಕ ದಳದ ಸಿಬ್ಬಂದಿ ಲಕ್ಷ್ಮಿನರಸಮ್ಮ, ಗೃಹಸಚಿವ ರಾಮಲಿಂಗಾರೆಡ್ಡಿ ಅವರ ಮಗಳು ಸೌಮ್ಯಾ ರೆಡ್ಡಿ ಅವರಿಗೂ ಸುರಕ್ಷತೆಯ ಪಾಠ ಮಾಡಿದ್ದಾರೆ.

ಫೆ. 21ರಂದು ಸಭೆಯೊಂದರಲ್ಲಿ ಪಾಲ್ಗೊಂಡಿದ್ದ ಸೌಮ್ಯಾ, ಸಭೆ ಮುಗಿಸಿಕೊಂಡು ಮನೆಯತ್ತ ಹೊರಟಿದ್ದರು. ಈ ವೇಳೆ ಫುಟ್‌ಪಾತ್‌ನಲ್ಲಿ ನಿಂತು

ಸಾರ್ವಜನಿಕರಿಗೆ ಜಾಗೃತಿ ಮೂಡಿಸುತ್ತಿದ್ದ ನರಸಮ್ಮ, ಅವರನ್ನೂ ತಡೆದು ನಿಲ್ಲಿಸಿದ್ದರು.

ಸೌಮ್ಯಾ ಗೃಹಸಚಿವರ ಮಗಳು ಎಂಬುದನ್ನು ಅರಿಯದ ಅವರು, ‘ಮೇಡಂ. ಸುರಕ್ಷತೆ ಬಗ್ಗೆ ಹೇಳುತ್ತೇನೆ. ತಿಳಿದುಕೊಂಡು ಎಚ್ಚರ ವಹಿಸಿ’ ಎಂದು ಕೋರಿದ್ದರು. ಅದಕ್ಕೆ ಒಪ್ಪಿಕೊಂಡು ಒಂದು ನಿಮಿಷ ಜಾಗೃತಿ ಪಾಠ ಕೇಳಿದ್ದರು.

‘ರಸ್ತೆ ಬದಿಯಲ್ಲಿ ನಡೆದು ಹೋಗುವಾಗ ಆಭರಣವನ್ನು ಸೆರಗಿನಿಂದ ಮುಚ್ಚಿಕೊಳ್ಳಬೇಕು. ಇಲ್ಲದಿದ್ದರೆ, ಕಳ್ಳರು ಅವುಗಳನ್ನು ಕದ್ದೊಯ್ಯುವ ಅಪಾಯ

ವಿದೆ. ಯಾವುದೋ ರೂಪದಲ್ಲಿ ತಮ್ಮ ಗಮನ ಬೇರೆಡೆ ಸೆಳೆದು, ಮೊಬೈಲ್ ಹಾಗೂ ಬ್ಯಾಗ್‌ಗಳನ್ನೂ ಕಿತ್ತುಕೊಂಡು ಹೋಗುತ್ತಾರೆ. ಹೀಗಾಗಿ, ಅಪರಿಚಿತರು ಏನೇ ಹೇಳಿದರೂ ಆ ಬಗ್ಗೆ ಗಮನ ಕೊಡಬೇಡಿ. ಒಂದೇ ಒಂದು ಅನಾಹುತ ಆಗುವುದು ಕೂಡಾ ನಮಗೆ (ಪೊಲೀಸರಿಗೆ) ಇಷ್ಟವಿಲ್ಲ’ ಎಂದು ಕಿವಿಮಾತು ಹೇಳಿದ್ದರು. ಇದನ್ನುಸೌಮ್ಯಾ ಸಂಗಡಿಗರು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದರು.

ಆ ನಂತರ ಮನೆಗೆ ತೆರಳಿದ ಸೌಮ್ಯಾ, ಈ ಸುರಕ್ಷತೆ ಪಾಠದ ವಿಡಿಯೊವನ್ನು  ಫೇಸ್‌ಬುಕ್‌ನಲ್ಲಿ ಅಪ್‌ಲೋಡ್‌ ಮಾಡಿದ್ದಾರೆ. ಅದು ವೈರಲ್‌ ಆಗಿದೆ.

ಸೌಮ್ಯಾ, ‘ಜಯನಗರದಲ್ಲಿ ಅದ್ಭುತ ಗೃಹರಕ್ಷಕಿಯನ್ನು ನೋಡಿದೆ. ಇಂಥ ಬದ್ಧತೆ ಇರುವ ಸಿಬ್ಬಂದಿ ಇರುವುದರಿಂದಲೇ ಬೆಂಗಳೂರಿನಲ್ಲಿ ನಾವೆಲ್ಲರೂ ಸುರಕ್ಷಿತವಾಗಿದ್ದೇವೆ. ನರಸಮ್ಮ ಎಲ್ಲರಿಗೂ ಸ್ಫೂರ್ತಿ ತುಂಬುವಂಥ ಕೆಲಸ ಮಾಡಿದ್ದಾರೆ. ಇದುವೇ ಮಹಿಳಾ ಸಬಲೀ

ಕರಣ. ಪ್ರತಿದಿನವೂ ಮಹಿಳಾ ದಿನಾಚರಣೆ’ ಎಂದು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry