ಕಾರು ಮಗುಚಿ ನಗರದ ಇಬ್ಬರ ಸಾವು

7

ಕಾರು ಮಗುಚಿ ನಗರದ ಇಬ್ಬರ ಸಾವು

Published:
Updated:

ಮಾಗಡಿ: ಬುಧವಾರ ರಾತ್ರಿ ಕಾಳಾರಿ ಕ್ರಾಸ್‌ ಬಳಿ ಕಾರು ಮಗುಚಿ ಬಿದ್ದು ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಮೃತರನ್ನು ಬೆಂಗಳೂರು ಆಂಜನ ನಗರದ ಪುಟ್ಟಸ್ವಾಮಿ(46), ಬಸವರಾಜು(40) ಎಂದು ಗುರುತಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ನಾಗಣ್ಣ ಅವರನ್ನು ಬೆಂಗಳೂರಿನ ನಿಮ್ಹಾನ್ಸ್‌ಗೆ ದಾಖಲಿಸಲಾಗಿದೆ. ಭುವನೇಶ್ವರ್‌ಗೆ ಗಾಯಗಳಾಗಿವೆ.

ಬೆಂಗಳೂರಿನ ಆಂಜನಾ ನಗರದಿಂದ ಕುಣಿಗಲ್‌ ಗೆ ಹೋಗಿ ಹಿಂತಿರುಗುತ್ತಿದ್ದಾಗ ದುರ್ಘಟನೆ ನಡೆದಿದೆ ಎಂದು ಸಬ್‌ ಇನ್‌ಸ್ಪೆಕ್ಟರ್‌ ಬಿ.ರವಿ ತಿಳಿಸಿದ್ದಾರೆ. ಗಾಯಾಳುಗಳು ಮಾಗಡಿಯ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಮೃತರಿಬ್ಬರ ಶವಗಳನ್ನು ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದೆ. ಮಾಗಡಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry