‘ಭಾಷೆಯ ಬಗ್ಗೆ ಸಂಕುಚಿತತೆ ತೊರೆಯಬೇಕು’

7

‘ಭಾಷೆಯ ಬಗ್ಗೆ ಸಂಕುಚಿತತೆ ತೊರೆಯಬೇಕು’

Published:
Updated:
‘ಭಾಷೆಯ ಬಗ್ಗೆ ಸಂಕುಚಿತತೆ ತೊರೆಯಬೇಕು’

ಬೆಂಗಳೂರು: ಭಾಷೆಯ ಬಗ್ಗೆ ಸಂಕುಚಿತ ಭಾವನೆ ತೊರೆದು ವಿಶಾಲಮನೋಭಾವ ಬೆಳೆಸಿಕೊಳ್ಳಬೇಕು ಎಂದು ಶೇಷಾದ್ರಿಪುರ ಶಿಕ್ಷಣದತ್ತಿಯ ಪ್ರಧಾನ ಕಾರ್ಯದರ್ಶಿ ವೂಡೇ ಪಿ.ಕೃಷ್ಣ ಅಭಿಪ್ರಾಯಪಟ್ಟರು.

ಯಲಹಂಕದ ಶೇಷಾದ್ರಿಪುರ ಪ್ರಥಮದರ್ಜೆ ಕಾಲೇಜಿನಲ್ಲಿ ಭಾಷಾಸಂಗಮ ವೇದಿಕೆ ಆಶ್ರಯದಲ್ಲಿ ಆಯೋಜಿಸಿದ್ದ ‘ಭಾಷಾ ಸಾಮರಸ್ಯ’ ಕುರಿತ ವಿಶೇಷಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು

ವಿವಿಎಸ್ ಪದವಿಕಾಲೇಜಿನ ಪ್ರಾಂಶುಪಾಲ ಡಾ.ಎಂ.ಸಿ.ಪ್ರಕಾಶ್, ‘ಸಾಹಿತಿಗಳಾದ ಮಾಸ್ತಿ, ಕುವೆಂಪು, ಡಿವಿಜಿ, ಅಡಿಗರು ಇಂಗ್ಲಿಷ್‌ ಭಾಷೆಯಿಂದ ಪುಷ್ಠಿ ಪಡೆದರೂ, ತಮ್ಮ ಭಾವನೆಗಳನ್ನು ಮಾತೃಭಾಷೆಯಲ್ಲಿಯೇ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳು ಈ ದಿಸೆಯಲ್ಲಿ ಚಿಂತನೆ ನಡೆಸಬೇಕು’ ಎಂದು ಸಲಹೆ ನೀಡಿದರು.

ವಿದ್ವಾಂಸ ಡಾ.ಮಲ್ಲೇಪುರ ಜಿ. ವೆಂಕಟೇಶ್‌, ‘ವಿದ್ಯಾರ್ಥಿಗಳು ಭಾಷೆಯನ್ನು ಬಳಸುವಾಗ ಬಹಳ ಎಚ್ಚರಿಕೆಯಿಂದ ಯೋಚಿಸಿ, ಮಾತನಾಡಬೇಕು. ಅದೊಂದು ವ್ಯಕ್ತಿತ್ವದ ಭಾಗವಾಗಿದೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry