ಅಜಫ್ರಾನ್‌ ಉತ್ಪನ್ನ ಮಾರುಕಟ್ಟೆಗೆ

7

ಅಜಫ್ರಾನ್‌ ಉತ್ಪನ್ನ ಮಾರುಕಟ್ಟೆಗೆ

Published:
Updated:

ಬೆಂಗಳೂರು: ಮಾರ್ಜಕ ಉತ್ಪನ್ನಗಳ ತಯಾರಿಕಾ ಸಂಸ್ಥೆ ಅಜಫ್ರಾನ್‌ ‘ಹೋಂ– ಗ್ರೀನ್ ಆ್ಯಂಡ್‌ ಕ್ಲೀನ್’ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಸಂಸ್ಥೆಯು ದೇಶದ ಮೊದಲ ತೆಂಗು ಉತ್ಪನ್ನಗಳಿಂದ ದ್ರವರೂಪದ ಮಾರ್ಜಕ ತಯಾರಿಸುವ ಘಟಕ ಆರಂಭಿಸಿದೆ.

ಮುಂದಿನ ದಿನಗಳಲ್ಲಿ ಪರಿಸರ ಸ್ನೇಹಿ ಕೈತೊಳೆಯುವ ಮಾರ್ಜಕ, ಸುಗಂಧ ದ್ರವ್ಯಗಳು, ಸಾವಯವ ಮೇಣದ ಬತ್ತಿ ಮುಂತಾದ ಗೃಹೋಪಯೋಗಿ ಉತ್ಪನ್ನಗಳನ್ನು ಮಾರುಕಟ್ಟೆಗೆ ತರಲು ಉದ್ದೇಶಿಸಿದೆ. ಮೋರ್ ಹೈಪರ್‌ ಮತ್ತು ಸೂಪರ್ ಮಾರ್ಕೆಟ್‌ಗಳು, ರಿಲಯನ್ಸ್, ಸ್ಪಾರ್‌, ಹೈಪರ್‌ಸಿಟಿ ಮತ್ತು ಮೆಟ್ರೊ ಕ್ಯಾಷ್‌ ಅಂಡ್‌ ಕ್ಯಾರಿ ಮಳಿಗೆಗಳಲ್ಲಿ ಸಂಸ್ಥೆಯ ಉತ್ಪನ್ನಗಳು ದೊರೆಯಲಿವೆ. ಈ ಸಂಬಂಧ ಸಂಸ್ಥೆ ಒಪ್ಪಂದ ಮಾಡಿಕೊಂಡಿದೆ.

‘ಗೃಹಿಣಿಯರ ಅನುಕೂಲಕ್ಕಾಗಿ ವಿಶೇಷ ಮಾರ್ಜಕಗಳನ್ನು ಸಂಸ್ಥೆ ತಯಾರಿಸಿದೆ. ಜಿಡ್ಡು ಕಲೆಗಳನ್ನೂ ಸುಲಭವಾಗಿ ಅಳಿಸಲಿವೆ. ಸಾವಯವ ಉತ್ಪನ್ನಗಳನ್ನು ಮುಂದಿನ ತಿಂಗಳು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು’ ಎಂದು ಸಂಸ್ಥೆ ವಾಣಿಜ್ಯ ವಿಭಾಗದ ಮುಖ್ಯಸ್ಥ ಟಿ.ಆರ್‌. ಸುರೇಶ್ ಅವರು ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಜನರ ನಿತ್ಯದ ಕೆಲಸಗಳನ್ನು ಇನ್ನಷ್ಟು ಸರಳಗೊಳಿಸುವ ಸಾವಯವ ಉತ್ಪನ್ನಗಳನ್ನು ಪರಿಚಯಿಸುತ್ತಿದೆ’ ಎಂದು ಸಂಸ್ಥೆಯ ಕಾರ್ಯ ನಿರ್ವಾಹಕಯೇತರ ನಿರ್ದೇಶಕ ಎಲ್ಕಾನಾ ಎಜೆಕೀಲ್ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry