ಹೊಸ ನಿಯಮಗಳಿಗೆ ಪ್ರಣಯ್ ವಿರೋಧ

7

ಹೊಸ ನಿಯಮಗಳಿಗೆ ಪ್ರಣಯ್ ವಿರೋಧ

Published:
Updated:
ಹೊಸ ನಿಯಮಗಳಿಗೆ ಪ್ರಣಯ್ ವಿರೋಧ

ನವದೆಹಲಿ: ವಿಶ್ವ ಬ್ಯಾಡ್ಮಿಂಟನ್‌ ಫೆಡರೇಷನ್‌ (ಬಿಡಬ್ಲ್ಯುಎಫ್‌) ಜಾರಿಗೆ ತರಲು ಉದ್ದೇಶಿಸಿರುವ ಹೊಸ ನಿಯಮಗಳಿಗೆ ಭಾರತದ ಆಟಗಾರ ಎಚ್‌.ಎಸ್‌.ಪ್ರಣಯ್‌ ವಿರೋಧವ್ಯಕ್ತಪಡಿಸಿದ್ದಾರೆ.

‘ಸ್ಕೋರಿಂಗ್ ವಿಧಾನದಲ್ಲಿ ಬದಲಾವಣೆ ಹಾಗೂ ಅಂಗಳದಲ್ಲಿ ಆಟಗಾರರಿಗೆ ಕೋಚ್‌ಗಳು ಸಲಹೆ ನೀಡಬಾರದು ಎಂಬ ನಿಯ ಮಗಳಿಂದ ಬ್ಯಾಡ್ಮಿಂಟನ್ ಕ್ರೀಡೆಯ ವಾಣಿಜ್ಯ ಮೌಲ್ಯ ಹೆಚ್ಚುವುದಿಲ್ಲ’ ಎಂದು ಪ್ರಣಯ್ ಹೇಳಿದ್ದಾರೆ.

‘ಬ್ಯಾಡ್ಮಿಂಟನ್ ವೇಗದ ಕ್ರೀಡೆ. ಸ್ಪರ್ಧಿಗಳಿಗೆ ಗೇಮ್‌ಗಳ ನಡುವೆ ಅಗತ್ಯ ವಿರಾಮ ಸಿಗದಿದ್ದರೆ ಉಸಿರಾಡುವುದು ಕಷ್ಟ. ಜೊತೆಗೆ ಬೆವರು ಒರೆಸಿಕೊಳ್ಳಲು ನೀರು ಕುಡಿಯುವುದಕ್ಕೂ ಸಮಯ ಸಿಗುವುದಿಲ್ಲ. ಹೊಸ ನಿಯಮಗಳು ಆಟಗಾರರಿಗೆ ವಿರುದ್ಧವಾಗಿವೆ’ ಎಂದು ಪ್ರಣಯ್‌ ಅಭಿಪ್ರಾಯಪಟ್ಟಿದ್ದಾರೆ.

‘ಈಗ ಇದ್ದ ನಿಯಮಗಳು ಸ್ಪರ್ಧಿಗಳಿಗೆ ಪೂರಕವಾಗಿವೆ. ಬದಲಾವಣೆಯಿಂದ ಯಾವುದೇ ಪ್ರಯೋಜನ ಇಲ್ಲ. 21 ಪಾಯಿಂಟ್ ಮಾದರಿಯಲ್ಲಿ ಆಡುವುದರಿಂದ ಬೇಸರವಾಗುವುದಿಲ್ಲ. ನಿಯಮಗಳ ಬದಲಾವಣೆಗೆ ಬಿಡಬ್ಲ್ಯುಎಫ್‌ ನೀಡಿರುವ ಕಾರಣಗಳು ಕೂಡ ಸಮಂಜಸವಾಗಿಲ್ಲ’ ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry