ಹಾಕಿ: ‘ಸಿ’ ಗುಂಪಿನಲ್ಲಿ ಭಾರತ ತಂಡಕ್ಕೆ ಸ್ಥಾನ

7

ಹಾಕಿ: ‘ಸಿ’ ಗುಂಪಿನಲ್ಲಿ ಭಾರತ ತಂಡಕ್ಕೆ ಸ್ಥಾನ

Published:
Updated:

ನವದೆಹಲಿ: ಭುವನೇಶ್ವರದಲ್ಲಿ ನವೆಂಬರ್‌ 28ರಿಂದ ಡಿಸೆಂಬರ್‌ 16ರವರೆಗೆ ಆಯೋಜನೆಗೊಂಡಿರುವ ಪುರುಷರ ಹಾಕಿ ವಿಶ್ವಕಪ್‌ನಲ್ಲಿ ಭಾರತ ತಂಡ ‘ಸಿ’ ಗುಂಪಿನಲ್ಲಿ ಸ್ಥಾನ ಪಡೆದಿದೆ.

ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದು ಕೊಂಡಿದ್ದ ಬೆಲ್ಜಿಯಂ, ವಿಶ್ವ ರ‍್ಯಾಂಕಿಂಗ್‌ನಲ್ಲಿ 11ನೇ ಸ್ಥಾನದಲ್ಲಿರುವ ಕೆನಡಾ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಇದೇ ಗುಂಪಿನಲ್ಲಿ ಸ್ಥಾನ ಪಡೆದಿವೆ.

ಬುಧವಾರ ಅಂತರರಾಷ್ಟ್ರೀಯ ಹಾಕಿ ಫೆಡರೇಷನ್‌ (ಎಫ್‌ಐಎಚ್‌) ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಪದಕ ಗೆದ್ದಿರುವ ಭಾರತ ತಂಡ ನವೆಂಬರ್‌ 28ರಂದು ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಎದುರು ಆಡಲಿದೆ. ಬಳಿಕ ಬೆಲ್ಜಿಯಂ (ಡಿಸೆಂಬರ್‌ 2) ಮತ್ತು ಕೆನಡಾ (ಡಿ.8) ವಿರುದ್ಧ ಸೆಣಸಲಿದೆ.

‘ಎ’ ಗುಂಪಿನಲ್ಲಿ ಒಲಿಂಪಿಕ್ಸ್ ಚಾಂಪಿಯನ್ ಅರ್ಜೆಂಟೀನಾ ಸೇರಿದಂತೆ ನ್ಯೂಜಿಲೆಂಡ್‌, ಸ್ಪೇನ್‌ ಮತ್ತು ಫ್ರಾನ್ಸ್ ತಂಡಗಳು ಆಡಲಿವೆ. ಡಿಸೆಂಬರ್‌ 1ರಂದು ನಡೆಯುವ ಪಂದ್ಯದಲ್ಲಿ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಚಾಂಪಿಯನ್ ಆಗಿದ್ದ ಜರ್ಮನಿ ಹಾಗೂ ಪಾಕಿಸ್ತಾನ ತಂಡಗಳು ಪೈಪೋಟಿ ನಡೆಸಲಿವೆ. ಡಿಸೆಂಬರ್‌ 4ರಂದು ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ಮುಖಾಮುಖಿಯಾಗಲಿವೆ.

ಕ್ವಾರ್ಟರ್‌ಫೈನಲ್‌ ಪಂದ್ಯಗಳು ಡಿಸೆಂಬರ್‌ 12 ಮತ್ತು 13ರಂದು ನಡೆಯಲಿವೆ.

ಡಿ.15ರಂದು ಸೆಮಿ ಫೈನಲ್ ಪಂದ್ಯಗಳು ಹಾಗೂ ಫೈನಲ್‌ ಡಿ.16ರಂದು ಆಯೋಜನೆಗೊಂಡಿವೆ.

ಗುಂಪುಗಳು: ‘ಎ’: ಅರ್ಜೆಂಟೀನಾ, ನ್ಯೂಜಿಲೆಂಡ್‌, ಸ್ಪೇನ್‌, ಫ್ರಾನ್ಸ್‌. ‘ಬಿ’: ಆಸ್ಟ್ರೇಲಿಯಾ, ಇಂಗ್ಲೆಂಡ್‌, ಐರ್ಲೆಂಡ್‌, ಚೀನಾ. ‘ಸಿ’: ಬೆಲ್ಜಿಯಂ, ಭಾರತ, ಕೆನಡಾ, ದಕ್ಷಿಣ ಆಫ್ರಿಕಾ. ‘ಡಿ’: ನೆದರ್ಲೆಂಡ್ಸ್‌, ಜರ್ಮನಿ, ಮಲೇಷ್ಯಾ, ಪಾಕಿಸ್ತಾನ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry