4

ಸ್ಲಮ್ ಮುಕ್ತ ರಾಜ್ಯ ನಿರ್ಮಾಣ :ಬಿಜೆಪಿಯ ಸಂಕಲ್ಪ

Published:
Updated:

ರಬಕವಿ ಬನಹಟ್ಟಿ : ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಅಂತೆಯೇ ಸರ್ವರಿಗೂ ಸಮಸೂರು. ಇದು ನಮ್ಮ ಬಿಜೆಪಿಯ ಸಂಕಲ್ಪವಾಗಿದ್ದು, ಆ ನಿಟ್ಟಿನಲ್ಲಿ ನಮ್ಮ ಸ್ಲಮ್‌ ಮೊರ್ಚಾ ವತಿಯೊಂದ ಸರ್ವೆ ಕಾರ್ಯವನ್ನು ಮಾಡಿಸಿ ಮುಂದಿನ ದಿನಗಳಲ್ಲಿ ನಮ್ಮ ಪಕ್ಷದ ಆಡಳಿತದ ಅವಧಿಯಲ್ಲಿ ಸ್ಲಮ್‌ ಮುಕ್ತ ಕರ್ನಾಟಕವನ್ನು ನಿರ್ಮಾಣ ಮಾಡುವು ಗುರಿಯನ್ನು ಹೊಂದಿದ್ದೇವೆ ಎಂದು ರಾಜ್ಯ ಸ್ಲಮ್‌ ಮೋರ್ಚಾ ಘಟಕದ ಉಪಾಧ್ಯಕ್ಷ ಡಾ. ಮಾರುತೇಶ ಹೇಳಿದರು.

ಅವರು ಮಂಗಳವಾರ ಸ್ಥಳೀಯ ಬಿಜೆಪಿ ಕಾರ್ಯಾಲಯದಲ್ಲಿ ಬಿಜೆಪಿಯ ಸ್ಲಂ ಮೋರ್ಚಾ ಆಶ್ರಯದಲ್ಲಿ ಕರ್ನಾಟಕದಲ್ಲಿಯ ಸ್ಲಮ್‌ಗಳ ಸ್ಥಿತಿಗತಿಯ ಸಮೀಕ್ಷಾ ವರದಿಯ ಸ್ಲಮ್ ದುರ್ಭಾಗ್ಯ ವರದಿಯನ್ನು ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ರಾಜ್ಯದ ಎಲ್ಲಾ ಜಿಲ್ಲೆಗಳನ್ನು ಕೇಂದ್ರಿಕರಿಸಿ ನಮ್ಮ ಹಿರಿಯ ನಾಯಕರು ವಾಸ್ತವ್ಯವನ್ನು ಮಾಡಲಿದ್ದಾರೆ. ಅದೇ ರೀತಿಯಾಗಿ ಜಿಲ್ಲೆಯ ಗುಡೂರದಲ್ಲಿ ಮಾರ್ಚ್‌ 4 ರಂದು ರಾಜ್ಯದ ನಾಯಕರು ಹಾಗೂ ಸ್ಥಳಿಯ ಮುಖಂಡರು ಸೇರಿ ವಾಸ್ತವ್ಯ ಮಾಡಬೇಕೆಂದು ತೀರ್ಮಾನಿಸಿದ್ದೇವೆ ಎಂದು ತಿಳಿಸಿದರು.

ಬಾಗಲಕೋಟೆ ಜಿಲ್ಲೆಯಲ್ಲಿ ಒಟ್ಟು 64 ಸ್ಲಮ್‌ಗಳಿವೆ. ಅದರಲ್ಲಿ 17 ಸ್ಲಮ್‌ಗಳನ್ನು ಸರ್ವೆ ಮಾಡಿದ್ದೇವೆ. ಸ್ಲಮ್‌ಗಳ ಅಭಿವೃದ್ಧಿಗೆ ಎರಡುವರೆ ಸಾವಿರ ಕೋಟಿ ಹಣ ಕೇಂದ್ರದಿಂದ ರಾಜ್ಯ ಸರ್ಕಾರಕ್ಕೆ ಬಂದಿದೆ. ಆದರೆ ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ಶೇ. 20 ರಷ್ಟು ಮಾತ್ರ ಖರ್ಚು ಮಾಡಿದೆ. ಈ ಸರ್ಕಾರ ಸ್ಲಮ್‌ಗಳಲ್ಲಿ ವಾಸಿಸುವಂತವರಿಗೆ ಸೂರನ್ನು ಒದಗಿಸಿಕೊಟ್ಟಿಲ್ಲ ಎಂದು ಡಾ.ಮಾರುತೇಶ ಆರೋಪಿಸಿದರು.

ಬಾಗಲಕೋಟೆ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಸಿದ್ದು ಸವದಿ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿ, ಭಾರತದ ದೀನ ದಲಿತರ ಉದ್ಧಾರವೇ ಭಾರತದ ಉದ್ಧಾರವಾಗಿದೆ. ಜಿಲ್ಲೆಯ ಸ್ಲಮ್‌ಗಳಲ್ಲಿ ವಾಸಿಸುವವರ ಜನಸಂಖ್ಯೆ- 23,730 ಇದ್ದು, -5975 ಕುಟುಂಬಳಿವೆ ಮತ್ತು 6115 ಮನೆಗಳು ಇವೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಮುಂಬರುವ ದಿನಗಳಲ್ಲಿ ಬಿಜೆಪಿ ಸರ್ಕಾರ ರಚನೆಯಾದ ನಂತರ ಸ್ಲಮ್‌ಗಳ ಅಭಿವೃದ್ಧಿಗೆ ಎಲ್ಲ ರೀತಿಯ ಮೂಲ ಸೌಕರ್ಯಗಳನ್ನು ನೀಡಲಾಗುತ್ತದೆ. ನಮ್ಮ ಸ್ಲಮ್‌ ಮೊರ್ಚಾ ವತಿಯಿಂದ ತಂಡಗಳನ್ನು ರಚಿಸಿ ಸ್ಲಮ್‌ಗಳ ಬಗ್ಗೆ ಮಾಹಿತಿ ಕಲೆ ಹಾಕಿ ವರದಿಯನ್ನು ತಯಾರಿಸಿಲಾಗಿದೆ. ಇದರಿಂದಾಗಿ ಸ್ಲಮ್‌ ಪ್ರದೇಶಗಳನ್ನು ಯಾವ ರೀತಿಯಾಗಿ ಅಭಿವೃದ್ಧಿ ಮಾಡಲು ಸಾಧ್ಯವಿದೆ ಎಂಬುದರ ಬಗ್ಗೆ ಚಿಂತನೆ ಮಾಡಲು ಸಹಾಯವಾಗುತ್ತದೆ ಎಂದು ಸವದಿ ತಿಳಿಸಿದರು.

ಈ ಸಂದರ್ಭದಲ್ಲಿ ರಾಜ್ಯ ಸ್ಲಮ್‌ ಮೋರ್ಚಾ ಕಾರ್ಯದರ್ಶಿ ದತ್ತಾತ್ರೆಯ ಸಿಂಧೆ, ಜಿಲ್ಲಾ ಸ್ಲಮ್‌ ಮೋರ್ಚಾ ಅಧ್ಯಕ್ಷ ವೆಂಕಟೇಶ ಲೋಕಾಪೂರ, ಜಿಲ್ಲಾ ಪಂಚಾಯ್ತಿ ಸದಸ್ಯ ಪರಶುರಾಮ ಬಸವ್ವಗೋಳ, ಬಿಜೆಪಿ ನಗರ ಘಟಕದ ಅಧ್ಯಕ್ಷ ರಾಜು ಅಂಬಲಿ, ಕುಮಾರ ಕದಂ, ಅಶೋಕ ರಾವಳ, ಈಶ್ವರ ಪಾಟೀಲ, ಆನಂದ ಕಂಪು, ಶಂಕರ ಶೀಲವಂತ ಸೇರಿದಂತೆ ಅನೇಕರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry