ಮುಸ್ಲಿಮ್ ಧರ್ಮದಲ್ಲಿನ ಮಾನವೀಯ ಮೌಲ್ಯ ಪಸರಿಸಲು ಯುವಕರು ಸ್ವಯಂ ಮುಂದಾಳತ್ವ ವಹಿಸಿ: ಮೋದಿ

7

ಮುಸ್ಲಿಮ್ ಧರ್ಮದಲ್ಲಿನ ಮಾನವೀಯ ಮೌಲ್ಯ ಪಸರಿಸಲು ಯುವಕರು ಸ್ವಯಂ ಮುಂದಾಳತ್ವ ವಹಿಸಿ: ಮೋದಿ

Published:
Updated:
ಮುಸ್ಲಿಮ್ ಧರ್ಮದಲ್ಲಿನ ಮಾನವೀಯ ಮೌಲ್ಯ ಪಸರಿಸಲು ಯುವಕರು ಸ್ವಯಂ ಮುಂದಾಳತ್ವ ವಹಿಸಿ: ಮೋದಿ

ನವದೆಹಲಿ: ನಮ್ಮ ಹೋರಾಟ ಭಯೋತ್ಪಾದನೆಯ ವಿರುದ್ಧವೇ ಹೊರತು ಮುಸ್ಲಿಮ್ ಧರ್ಮದ ವಿರುದ್ಧವಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ‌ಅವರು ಹೇಳಿದ್ದಾರೆ.

'ಇಸ್ಲಾಮಿಕ್ ಹೆರಿಟೇಜ್: ಪ್ರೋಮೊಟಿಂಗ್ ಆಂಡರ್‌ಸ್ಟ್ಯಾಂಡಿಂಗ್ ಆಂಡ್ ಮಾಡರೇಶನ್' ಎಂಬ ವಿಷಯಧಾರಿತ ಮೇಲೆ ನಡೆದ ಸಭೆಯಲ್ಲಿ ಭಾಗಿಯಾದ ಮೋದಿ ಅವರು, ಯುವಕರು ಸ್ವಯಂ ಮುಂದಾಳತ್ವ ವಹಿಸಿ ಮುಸ್ಲಿಮ್ ಧರ್ಮದಲ್ಲಿನ ಮಾನವೀಯ ಮೌಲ್ಯಗಳನ್ನು ಪಸರಿಸಬೇಕು ಎಂದು ಕಿವಿಮಾತು ಹೇಳಿದರು.

ಈ ಸಭೆಯಲ್ಲಿ ಜೋರ್ಡಾನ್‌ ನ ರಾಜ ಅಬ್ದುಲ್ಲಾ–2  ಅವರು ಭಾಗವಹಿಸಿದ್ದು, ಇಬ್ಬರು ನಾಯಕರು ಪ್ರಪಂಚದಲ್ಲಿ ಶಾಂತಿ ನೆಲೆಸಲು ಕೈಗೊಳ್ಳಬೇಕಾದ ನಿಲುವುಗಳನ್ನು ಪರಸ್ಪರ ಹಂಚಿಕೊಂಡರು.

ನಮ್ಮ ಹೋರಾಟ ಭಯೋತ್ಫಾದನೆ, ಮೂಲಭೂತವಾದ ಹಾಗೂ ದೇಶದ ಯುವಕರನ್ನು ದಾರಿತಪ್ಪಿಸುವ ಮನಸ್ಥಿತಿಗಳ ವಿರುದ್ದ. ಯಾವುದೇ ಧರ್ಮದ ವಿರುದ್ಧವಲ್ಲ ಎಂದು ಮೋದಿ ಸ್ಪಷ್ಟಪಡಿಸಿದ್ದಾರೆ.

ಭಾರತ ಪ್ರಪಂಚದಲ್ಲಿನ ಪ್ರಮುಖ ಧರ್ಮಗಳ ತೊಟ್ಟಿಲು.  ಪ್ರತಿಯೊಂದು ಧರ್ಮವೂ ಮಾನವೀಯ ಅಂಶಗಳ ಕಣಜ. ಎಲ್ಲಾ ನಂಬಿಕೆಗಳು ಮಾನವೀಯ ಅಂಶಗಳನ್ನು ಪಸರಿಸುತ್ತವೆ.  ಯವಕರು ಸ್ವಯಂಪ್ರೇರಿತರಾಗಿ ಮುಸ್ಲಿಂ ಧರ್ಮದೊಳಗಿನ ಮಾನವೀಯ ಅಂಶಗಳನ್ನು  ಎಲ್ಲೆಡೆ ಹರಡಬೇಕು. ಆಧುನಿಕ ತಂತ್ರಜ್ಞಾನದ ಬಳಕೆಯಲ್ಲೂ ಯುವಕರು ನಿಸ್ಸೀಮರು ಎಂದು ಅಭಿಪ್ರಾಯಪಟ್ಟಿದ್ದಾರೆ. 

ಪ್ರತಿದಿನ ಧರ್ಮದ ಬಗ್ಗೆ ಕೇಳುತ್ತಿರುವ ಹಾಗೂ ವಿಚಾರಗಳು ಜನರನ್ನು ಪ್ರತ್ಯೇಕಿಸುತ್ತಿವೆ. ಸಂಘರ್ಷಗಳು ದೇವರ ಬಗೆಗಿನ ಸಿದ್ದಾಂತಗಳನ್ನು ವಿರೂಪಗೊಳಿಸುತ್ತಿವೆ. ಮುಸ್ಲಿಂ ಧರ್ಮವು ಮೂಲಭೂತವಾದ ಧರ್ಮವಲ್ಲ. ನಮ್ಮ ಎರಡು ರಾಷ್ಟ್ರಗಳಿಗೆ ನಂಬಿಕೆಗಳೇ ಸ್ಪೂರ್ತಿದಾಯಕ ಅಂಶಗಳು.  ಎಲ್ಲಾ ಧರ್ಮಗಳ ಏಕತೆಯೇ ಮಾನವೀಯತೆ ಎಂದು ರಾಜ ಅಬ್ದುಲ್ಲಾ–2  ಅಭಿಪ್ರಾಯಪಟ್ಟಿದ್ದಾರೆ.

New Delhi: Prime Minister Narendra Modi and visiting Jordan King Abdullah II on Thursday agreed that the fight against terrorism is not a fight against Islam or any other religion, but against those who misguide the innocent youth.

The two leaders also agreed that both India and Jordan shared a responsibility to bring peace in the world.

''The fight against terrorism and radicalisation not against any religion, it is against the mindset that misguides youth,'' PM Modi said.

During his speech, the PM stated that the youths should associate themselves with humanitarian aspects of Islam and also be able to use modern science.

''All faiths promote human values. Therefore, our youth should associate themselves with the humanitarian aspects of Islam and should also able to use modern technology," the PM said.

Every religion promotes human values, the Prime Minister said in his address at a conference on 'Islamic Heritage: Promoting Understanding & Moderation', where Jordan's King Abdullah II was also present.

India, the Prime Minister added, had been a "cradle of all major religions in the world".

Hailing Indian democracy as a celebration of age-old plurality, the PM said, ''India is the cradle of all major religions in the world.''

Speaking on his turn, Jordan King said, ''Too much of what is heard in news and what is seen about religion today is all about what separates people. Around the world, suspicions are inflamed by what different groups don't know about others. Such ideologies of hate distort the word of God to stir conflict.''

Endorsing PM Modi, King Abdullah said, ''Fight against terror is not fight between religions.''

''Islam is not about radicalisation, faith inspires both our countries,'' King Abdullah said adding, ''Humanity unites all religions.''

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry