ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀನುಗಾರರಿಗೆ ಸಬ್ಸಿಡಿ‌ ಸೀಮೆ ಎಣ್ಣೆ‌ ಪೂರೈಕೆಗೆ ₹53 ಕೋಟಿ: ಸಚಿವ‌ ಖಾದರ್

Last Updated 1 ಮಾರ್ಚ್ 2018, 13:15 IST
ಅಕ್ಷರ ಗಾತ್ರ

ಮಂಗಳೂರು: ಮೀನುಗಾರರಿಗೆ ಸೀಮೆ ಎಣ್ಣೆ ವಿಚಾರದಲ್ಲಿ ಬಿಜೆಪಿ ವ್ಯರ್ಥ‌ ಆರೋಪ ‌ಮಾಡುತ್ತಿದೆ. ಮೀನುಗಾರಿಕೆ ಫಿಸಿಬಿಲಿಟ್ ಸರ್ಟಿಫಿಕೇಟ್‌ ನೀಡುವ‌ಪ್ರಕ್ರಿಯೆ ಸರಳಗೊಳಿಸಿದ್ದು, 1300 ಪ್ರಮಾಣಪತ್ರ ವಿತರಣೆ ಮಾಡಲಾಗಿದೆ ಎಂದು ಆಹಾರ ಸಚಿವ ಯು.ಟಿ ಖಾದರ್ ಹೇಳಿದರು.

ನಗರದಲ್ಲಿ‌ ಗುರುವಾರ ಪತ್ರಿಕಾಗೋಷ್ಠಿಯಲ್ಲಿ‌ ಮಾತನಾಡಿದ ಅವರು, ಕೇಂದ್ರ ಸರ್ಕಾರವೇ‌ ಅಡುಗೆ ಹೊರತುಪಡಿಸಿ ಬೇರೆ ಯಾವುದೇ ಉದ್ದೇಶಕ್ಕೆ ಸಬ್ಸಿಡಿ ಸೀಮೆ ಎಣ್ಣೆ ಬಳಕೆ ಮಾಡದಂತೆ ಆದೇಶ ಹೊರಡಿಸಿದೆ. ಹೀಗಾಗಿ ಮೀನುಗಾರರಿಗೆ ಸೀಮೆ ಎಣ್ಣೆ ವಿತರಣೆ ಸಾಧ್ಯವಾಗಿಲ್ಲ ಎಂದು ತಿಳಿಸಿದರು.

ಈ ಸಮಸ್ಯೆ ನಿವಾರಿಸಿ ಮೀನುಗಾರರಿಗೆ ಸೀಮೆ ಎಣ್ಣೆ ಒದಗಿಸಲು ಮುಖ್ಯಮಂತ್ರಿ‌ಅವರು ₹53 ಕೋಟಿ ಅನುದಾನ ಬಿಡುಗಡೆ ಮಾಡಿದ್ದಾರೆ. ಈ ಪೈಕಿ ಉಡುಪಿ- ದ‌ಕ ಸೇರಿ ₹3.5 ಕೋಟಿ ಅನುದಾನವನ್ನು ಸೀಮೆ ಎಣ್ಣೆ ಅನುದಾನಕ್ಕೆ ನೀಡಲಾಗಿದೆ ಎಂದು ಹೇಳಿದರು.

ಕೇಂದ್ರ‌ ಸರ್ಕಾರದಿಂದ ಕಳೆ‌ದ ನಾಲ್ಕು ತಿಂಗಳಿಂದ ಮೀನುಗಾರರಿಗೆ ಸಬ್ಸಿಡಿ ಸೀಮೆ‌ ಎಣ್ಣೆಯ ವಿತರಣೆ ಸ್ಥಗಿತವಾಗಿದೆ. ಹೀಗಾಗಿ ಮುಕ್ತ ಮಾರುಕಟ್ಟೆಯಲ್ಲಿ ಖರೀದಿ ಮಾಡಿ ಮೀನುಗಾರರಿಗೆ ಸೀಮೆಎಣ್ಣೆ ಪೂರೈಸಲಾಗುತ್ತಿದೆ ಎಂದು ತಿಳಿಸಿದರು.

ದಕ್ಷಿಣ‌ಕನ್ನಡದ‌ 914, ಉಡುಪಿ‌ ಜಿಲ್ಲೆಗೆ 2510 ಉಡುಪಿ ಸೇರಿದಂತೆ‌ ಕರಾವಳಿಯ ಮೂರು ಜಿಲ್ಲೆಗಳ 4514 ನಾಡದೋಣಿಗಳಿಗೆ‌ ಸೀಮೆ ಎಣ್ಣೆ‌‌ ಪೂರೈಕೆ ಮಾಡಲಾಗುತ್ತಿದೆ‌ ಎಂದರು.

₹34ಕ್ಕೆ ಖರೀದಿಸಿ, ₹25 ದರದಲ್ಲಿ‌ ಒಂದು ನಾಡದೋಣಿಗೆ 300 ಲೀಟರ್ ನಂತೆ ಸೀಮೆ ಎಣ್ಣೆ ವಿತರಿಸಲಾಗುವುದು ಎಂದು ತಿಳಿಸಿದರು.

ಹರೇಕಳದಲ್ಲಿ ₹176 ಕೋಟಿ ಯೋಜನೆಯನ್ನು ಬಹುಗ್ರಾಮ ಕುಡಿಯುವ‌ ನೀರಿನ‌ ಯೋಜನೆಯನ್ನಾಗಿ ಪರಿವರ್ತಿಸಲು‌ ನಿರ್ಧರಿಸಲಾಗಿದೆ‌ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT