ರೌಡಿಸಂನ ಸರ್ಕಾರ್‌

ಗುರುವಾರ , ಮಾರ್ಚ್ 21, 2019
25 °C

ರೌಡಿಸಂನ ಸರ್ಕಾರ್‌

Published:
Updated:
ರೌಡಿಸಂನ ಸರ್ಕಾರ್‌

ಈ ಚಿತ್ರದ ಹೆಸರು ಸರ್ಕಾರ್. ಹೆಸರು ಹೀಗಿದೆ ಅಂದಮಾತ್ರಕ್ಕೆ, ಈ ಚಿತ್ರವು ಸರ್ಕಾರದ ಬಗ್ಗೆ ಮಾತನಾಡುತ್ತದೆ ಅಂತಲೋ, ಒಬ್ಬ ಆ್ಯಂಗ್ರಿ ಯಂಗ್ ಮ್ಯಾನ್‌ ವ್ಯವಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸುವ ಕಥೆ ಇದರಲ್ಲಿ ಇದೆ ಅಂತಲೋ ಭಾವಿಸಬೇಕಿಲ್ಲ. ಇದೊಂದು ಪಕ್ಕಾ ಮಾಸ್‌ ಸಿನಿಮಾ. ‘ಇದು ಮಾಸ್‌ ಮನೋರಂಜನೆಯ ಸಿನಿಮಾ’ ಎಂದು ಸಿನಿತಂಡವೇ ಹೇಳಿದೆ.

‘ಸರ್ಕಾರ್‌’ ಚಿತ್ರ ಶುಕ್ರವಾರ ತೆರೆಗೆ ಬರಲಿದೆ. ಹಾಗಾಗಿ, ಚಿತ್ರದ ಬಗ್ಗೆ ಮಾಹಿತಿ ನೀಡಲು ನಿರ್ದೇಶಕ ಎಸ್. ಮಂಜು ಪ್ರೀತಂ ಅವರು ಸುದ್ದಿಗೋಷ್ಠಿ ಕರೆದಿದ್ದರು. ಚಿತ್ರದ ನಾಯಕ ನಟ ಜಗ್ಗಿ, ನಾಯಕಿ ಲೇಖಾಚಂದ್ರ, ಸಂಗೀತ ನಿರ್ದೇಶಕ ಸತೀಶ್ ಆರ್ಯ ಅವರೂ ಸುದ್ದಿಗೋಷ್ಠಿಯಲ್ಲಿ ಇದ್ದರು.

‘ನಾನು ಪೋಸ್ಟ್‌ಮ್ಯಾನ್ ಆಗಿ ಕೆಲಸ ಮಾಡಿದವನು. ಚಿತ್ರದ ಕಥೆ ಮೊದಲೇ ಸಿದ್ಧವಾಗಿತ್ತು. ಜಗ್ಗಿ ಅವರಿಗೆ ಕಥೆಯನ್ನು ಹೇಳಿದಾಗ, ಅವರು ರೋಮಾಂಚಿತರಾಗಿದ್ದರು. ಸಿನಿಮಾದಲ್ಲಿ ತಾಯಿಯ ಸೆಂಟಿಮೆಂಟ್, ಒಂದಿಷ್ಟು ಪ್ರೀತಿ ಹಾಗೂ ಆ್ಯಕ್ಷನ್ ಇವೆ’ ಎಂದರು ಮಂಜು. ಸರ್ಕಾರ್‌ ಎಂಬುದು ಚಿತ್ರದ ಒಂದು ಪಾತ್ರದ ಹೆಸರು ಎಂದರು ಮಂಜು.

‘ಮಾಸ್‌ ವೀಕ್ಷಕರಿಗೆ ಮನೋರಂಜನೆ ಒದಗಿಸಲು ಬೇಕಿರುವ ವಸ್ತು ಈ ಚಿತ್ರದಲ್ಲಿ ಇದೆ. ರೌಡಿಸಂ ಕೂಡ ಇದರಲ್ಲಿದೆ’ ಎಂದು ಅವರು ಹೇಳಿದರು.

ಜಗ್ಗಿ ಅವರು ನಾಯಕನಾಗಿ ನಟಿಸಿದ ಮೊದಲ ಸಿನಿಮಾ ಇದು. ‘ಈ ಚಿತ್ರದಲ್ಲಿ ರೌಡಿಸಂ ಇದೆ, ಪ್ರೀತಿ ಇದೆ ಎಂಬ ಬಗ್ಗೆ ನಿರ್ದೇಶಕರು ಮೊದಲು ನನ್ನ ಬಳಿ ಹೇಳಿರಲಿಲ್ಲ. ಆದರೆ, ತಾಯಿ ಸೆಂಟಿಮೆಂಟ್ ಇದೆ ಎಂಬುದನ್ನು ಹೇಳಿದ್ದರು. ನನಗೂ ಮದರ್ ಸೆಂಟಿಮೆಂಟ್ ತುಸು ಜಾಸ್ತಿ’ ಎಂದರು ಜಗ್ಗಿ. ‘ಮನುಷ್ಯ ತನ್ನ ಜೀವನದಲ್ಲಿ ಏನು ಕಳೆದುಕೊಳ್ಳುತ್ತಾನೆ, ಅದಕ್ಕೆ ಕಾರಣ ಏನು ಎಂಬುದು ಚಿತ್ರದ ಕಥೆ. ನನ್ನದು ರೌಡಿಯ ಪಾತ್ರ’ ಎಂದು ಜಗ್ಗಿ ತಿಳಿಸಿದರು. ಚಿತ್ರದಲ್ಲಿ ಬರುವ ಒಂದು ಪುಟ್ಟ ಪ್ರೀತಿಯ ಕಥೆಗೆ ಜೀವ ತುಂಬುವ ಕೆಲಸವನ್ನು ನಟಿ ಲೇಖಾ ಚಂದ್ರ ಮಾಡಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry