ಮೆಹುಲ್ ಚೋಕ್ಸಿ ಒಡೆತನದ ₹1,217.20 ಕೋಟಿ ಮೌಲ್ಯದ ಆಸ್ತಿ, ಸ್ವತ್ತುಗಳ ಮುಟ್ಟುಗೋಲು

ಸೋಮವಾರ, ಮಾರ್ಚ್ 25, 2019
29 °C

ಮೆಹುಲ್ ಚೋಕ್ಸಿ ಒಡೆತನದ ₹1,217.20 ಕೋಟಿ ಮೌಲ್ಯದ ಆಸ್ತಿ, ಸ್ವತ್ತುಗಳ ಮುಟ್ಟುಗೋಲು

Published:
Updated:
ಮೆಹುಲ್ ಚೋಕ್ಸಿ ಒಡೆತನದ ₹1,217.20 ಕೋಟಿ ಮೌಲ್ಯದ ಆಸ್ತಿ, ಸ್ವತ್ತುಗಳ ಮುಟ್ಟುಗೋಲು

ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ ವಂಚಿಸಿದ ಪ್ರಕರಣದಲ್ಲಿ ವಜ್ರ ವ್ಯಾಪಾರಿ ಮೆಹುಲ್ ಚೋಕ್ಸಿಗೆ ಸೇರಿದ ₹1,217.20 ಕೋಟಿ ಮೌಲ್ಯದ ಆಸ್ತಿ, ಸ್ವತ್ತುಗಳನ್ನು ಜಾರಿ ನಿರ್ದೇಶನಾಲಯ (ಇ.ಡಿ) ಗುರುವಾರ ಮುಟ್ಟುಗೋಲು ಹಾಕಿಕೊಂಡಿದೆ.

ಪ್ರಕರಣಕ್ಕೆ ಸಂಬಂಧಿಸಿ ಪಂಜಾಬ್ ನ್ಯಾಷನಲ್ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ, ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಸುನಿಲ್ ಮೆಹ್ತಾ ಮತ್ತು ವಿಭಾಗೀಯ ಅಧಿಕಾರಿಯನ್ನು ಮುಂಬೈನಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ.

ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿರುವ ₹ 500 ಕೋಟಿ ಮೌಲ್ಯದ 170 ಎಕರೆ ಪ್ರದೇಶವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

ಒಟ್ಟಾರೆಯಾಗಿ 41 ಸ್ವತ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಇದರಲ್ಲಿ 15 ಫ್ಲ್ಯಾಟ್‌ಗಳು, 17 ಕಚೇರಿಗಳು, 1 ತೋಟದ ಮನೆ, 1 ಶಾಪಿಂಗ್ ಮಾಲ್ ಸೇರಿವೆ. ಅಲ್ಲದೆ, ಮಹಾರಾಷ್ಟ್ರದ  ನಾಸಿಕ್, ನಾಗ್ಪುರ, ಪನ್ವೇಲ್ ಮತ್ತು ತಮಿಳುನಾಡಿನ ವಿಲ್ಲುಪುರಂನಲ್ಲಿ ಒಟ್ಟು 231 ಎಕರೆ ವಿಸ್ತೀರ್ಣದ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry