ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲು ಟಿಕೆಟ್‌ಗಳು ಇನ್ನುಮುಂದೆ ಕನ್ನಡದಲ್ಲಿಯೂ ಲಭ್ಯ!

Last Updated 1 ಮಾರ್ಚ್ 2018, 17:15 IST
ಅಕ್ಷರ ಗಾತ್ರ

ಬೆಂಗಳೂರು: ಇನ್ನು ಮುಂದೆ ರೈಲು ಟಿಕೆಟ್‌ಗಳಲ್ಲಿ ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳ ಜತೆಗೆ ಕನ್ನಡವನ್ನೂ ಅಳವಡಿಸಲು ನೈರುತ್ಯ ರೈಲ್ವೆ ಇಲಾಖೆ ಚಿಂತನೆ ನಡೆಸಿದೆ. ಇದರ ಭಾಗವಾಗಿ ಪ್ರಾಯೋಗಿಕ ಮುದ್ರಣವನ್ನೂ ನಡೆಸಿದೆ.

ಇಲಾಖೆಯ ಈ ನಡೆ ಈ ಕುರಿತು ಬಹುದಿನಗಳಿಂದ ಬೇಡಿಕೆ ಇಟ್ಟಿದ್ದ ಕನ್ನಡ ಹೋರಾಟಗಾರರ ಸಂಭ್ರಮಕ್ಕೆ ಕಾರಣವಾಗಿದೆ.

‘ರಾಜ್ಯದ ಎಲ್ಲಾ ರೈಲು ನಿಲ್ದಾಣಗಳ ಟಿಕೆಟ್‌ ಕೌಂಟರ್‌ಗಳಲ್ಲಿ ಕನ್ನಡ ಮುದ್ರಿತ ಟಿಕೆಟ್‌ಗಳು ಲಭ್ಯವಿರಲಿವೆ. ಗಣಕೀಕೃತ ವ್ಯವಸ್ಥೆ ಇರುವ ಪ್ರಯಾಣಿಕರ ಮೀಸಲು ಟಿಕೆಟ್‌ ಸ್ವೀಕೃತಿ ಕೇಂದ್ರಗಳಲ್ಲಿಯೂ ಕನ್ನಡದಲ್ಲಿ ಮಾಹಿತಿ ಇರುವ ಟಿಕೆಟ್‌ಗಳು ದೊರೆಯಲಿದ್ದು, ಆನ್‌ಲೈನ್‌ ಮೂಲಕ ಟಿಕೆಟ್‌ ಬುಕ್‌ ಮಾಡುವವರಿಗೆ ಈ ಸೌಲಭ್ಯ ಇರದು’ ಎಂದು ನೈರುತ್ಯ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಇಂಗ್ಲಿಷ್‌, ಹಿಂದಿ ಸೇರಿದಂತೆ ಪ್ರಾದೇಶಿಕ ಭಾಷೆಗಳಲ್ಲಿ ಟಿಕೆಟ್‌ ಮುದ್ರಿಸುವ ಮನವಿಗೆ ಭಾರತೀಯ ರೈಲ್ವೆ ಪ್ರಯಾಣಿಕರ ಸೌಲಭ್ಯ ಸಮಿತಿ ಕಳೆದ ವರ್ಷವೇ ಸಮ್ಮತಿ ಸೂಚಿಸಿತ್ತು. ಅದರಂತೆ ಜನವರಿ 01, 2018ರಿಂದಲೇ ಆರಂಭವಾಗಬೇಕಿತ್ತು.

ಸದ್ಯ ಕನ್ನಡ ಹೋರಾಟಗಾರರು ಈ ಕ್ರಮವನ್ನು ಸ್ವಾಗತಿಸಿದ್ದಾರೆ. ಇದಕ್ಕೂ ಮೊದಲು ಕೇಂದ್ರ ಸರ್ಕಾರದ ಹಿಂದಿ ಹೇರಿಕೆ ವಿರುದ್ಧ ಹಾಗೂ ಆಡಳಿತದಲ್ಲಿ ಕನ್ನಡವನ್ನು ಪರಿಗಣಿಸುವಂತೆ ಒತ್ತಾಯಿಸಿ ಟ್ವಿಟರ್‌ನಲ್ಲಿ #ServeInMyLanguage ಅಭಿಯಾನ ಆರಂಭವಾಗಿತ್ತು.

ತಮಿಳುನಾಡು ಸೇರಿದಂತೆ ಅನೇಕ ರಾಜ್ಯಗಳು ಟಿಕೆಟ್‌ ಹಾಗೂ ಅಧಿಕೃತ ಮಾಹಿತಿಗಳು ಸ್ಥಳೀಯ ಭಾಷೆಗಳಲ್ಲಿ ಲಭ್ಯವಿರಬೇಕು ಎಂದು ಕಳೆದ ಕೆಲವು ವರ್ಷಗಳಿಂದ ಒತ್ತಾಯಿಸುತ್ತಿವೆ.

***

BENGALURU: In a move that could bring cheer to activists opposing the Centre’s alleged Hindi imposition in southern India, railway tickets will soon be printed in Kannada. This is besides English and Hindi.

South Western Railway officials said the tickets will be available at counters in stations across Karnataka. However, tickets booked online won’t be in Kannada. Unreserved tickets with information in Kannada will be available in computerised passenger reservation counters in Bengaluru.

Last year, Indian Railways’ passenger amenities committee approved a proposal to print tickets in the local language, apart from Hindi and English, from January 1, 2018.

Many states like Tamil Nadu have been demanding inclusion of local languages in tickets and official forms for the past few years.

Kannada activists have welcomed the move. In fact, there was a hashtag campaign on twitter #ServeInMyLanguage against alleged Hindi imposition and to recognize Kannada.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT