ಎಇಎನ್‌ಸಿಗೆ ಭಾರತ ತಂಡ: ಬಿಸಿಸಿಐ ನಕಾರ

7

ಎಇಎನ್‌ಸಿಗೆ ಭಾರತ ತಂಡ: ಬಿಸಿಸಿಐ ನಕಾರ

Published:
Updated:
ಎಇಎನ್‌ಸಿಗೆ ಭಾರತ ತಂಡ: ಬಿಸಿಸಿಐ ನಕಾರ

ಕರಾಚಿ: ಮುಂದಿನ ತಿಂಗಳಲ್ಲಿ ಪಾಕಿಸ್ತಾನದಲ್ಲಿ ನಡೆಯಲಿರುವ ಏಷ್ಯಾ ಎಮರ್ಜಿಂಗ್‌ ನೇಷನ್ಸ್ ಕಪ್‌ ಕ್ರಿಕೆಟ್ ಟೂರ್ನಿಗೆ ತಂಡವನ್ನು ಕಳುಹಿಸಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹಿಂದೇಟು ಹಾಕಿದೆ. ಹೀಗಾಗಿ ಟೂರ್ನಿ ಆಯೋಜಕರು ಗೊಂದಲಕ್ಕೆ ಸಿಲುಕಿದ್ದಾರೆ.

ಪಾಕಿಸ್ತಾನ ಕ್ರಿಕೆಟ್‌ ಮಂಡಳಿಯ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆಗೆ ಈ ವಿಷಯ ತಿಳಿಸಿದ್ದು, ಭಾರತ ತಂಡ ಪಾಲ್ಗೊಳ್ಳದೇ ಇದ್ದರೆ ಟೂರ್ನಿಯನ್ನು ಶ್ರೀಲಂಕಾ ಅಥವಾ ಬಾಂಗ್ಲಾದೇಶಕ್ಕೆ ಸ್ಥಳಾಂತರಿಸುವುದು ಅನಿವಾರ್ಯವಾಗಲಿದೆ ಎಂದಿದ್ದಾರೆ.

‘ಎಲ್ಲ ತಂಡಗಳು ಪಾಲ್ಗೊಳ್ಳುವ ಭರವಸೆ ಸಿಕ್ಕ ನಂತರ ಟೂರ್ನಿಯನ್ನು ಆಯೋಜಿಸಲು ನಿರ್ಧರಿಸಲಾಗಿತ್ತು. ಆದರೆ ಈಗ ಗೊಂದಲ ಉಂಟಾಗಿದೆ’ ಎಂದು ಅವರು ತಿಳಿಸಿದ್ದಾರೆ.

ಈ ವಿಷಯದ ಕುರಿತು ಪ್ರತಿಕ್ರಿಯಿಸಿದ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ನಜಾಮ್ ಸೇಥಿ ಕೊಲಂಬೋದಲ್ಲಿ ಶೀಘ್ರದಲ್ಲೇ ಏಷ್ಯಾ ಕ್ರಿಕೆಟ್‌ ಮಂಡಳಿಯ ಸಭೆ ಕರೆದು ಈ ವಿಷಯದ ಬಗ್ಗೆ ಚರ್ಚಿಸಲಾಗುವುದು ಎಂದರು.

ಮುಂಬೈಯಲ್ಲಿ 2008ರಲ್ಲಿ ಸಂಭವಿಸಿದ ಭಯೋತ್ಪಾದಕ ದಾಳಿಯ ನಂತರ ಭಾರತವು ಪಾಕಿಸ್ತಾನದಲ್ಲಿ ಯಾವುದೇ ದ್ವಿ‍ಪಕ್ಷೀಯ ಸರಣಿಗಳಲ್ಲಿ ಪಾಲ್ಗೊಂಡಿಲ್ಲ. ಈ ವಿಷಯದ ಕುರಿತ ಪಾಕಿಸ್ತಾನದ ವಾದಕ್ಕೆ ಐಸಿಸಿ ಮತ್ತು ಏಷ್ಯಾ ಕ್ರಿಕೆಟ್ ಸಮಿತಿಯ ಬೆಂಬಲ ಸಿಗುತ್ತಿಲ್ಲ. ಹೀಗಾಗಿ ಏಪ್ರಿಲ್‌ನಲ್ಲಿ ಕೋಲ್ಕತ್ತದಲ್ಲಿ ನಡೆಯುವ ಸಭೆಯಲ್ಲಿ ಪಾಲ್ಗೊಳ್ಳುವುದು ಅನುಮಾನ ಎಂದು ಸೇಥಿ ಹೇಳಿದ್ದಾರೆ. ಭಾರತದಿಂದ ವಿಸಾ ದೊರಕಿಸಿಕೊಡಲು ಐಸಿಸಿ ಮುಂದಾದರೆ ಮಾತ್ರ ಸಭೆಯಲ್ಲಿ ಭಾಗವಹಿಸಲು ಸಾಧ್ಯ ಎಂದು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry