ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್‌: ಕಪಿಲ್ ಕಳವಳ

ಗುರುವಾರ , ಮಾರ್ಚ್ 21, 2019
30 °C

ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್‌: ಕಪಿಲ್ ಕಳವಳ

Published:
Updated:
ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್‌: ಕಪಿಲ್ ಕಳವಳ

ಮೊನಾಕೊ: ಹಾರ್ದಿಕ್ ಪಾಂಡ್ಯ ಉತ್ತಮ ಆಲ್‌ರೌಂಡರ್‌ ಆಗಿ ಮುಂದುವರಿಯಬೇಕಾದರೆ ಇನ್ನಷ್ಟು ಉತ್ತಮವಾಗಿ ಬ್ಯಾಟಿಂಗ್ ಮಾಡಬೇಕಿದೆ ಎಂದು ಹಿರಿಯ ಕ್ರಿಕೆಟಿಗ ಕಪಿಲ್‌ದೇವ್ ಹೇಳಿದ್ದಾರೆ.

ಕೇಪ್‌ಟೌನ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ 93 ರನ್‌ ಗಳಿಸಿದ ನಂತರ ಪಾಂಡ್ಯ ಯಾವುದೇ ಮಾದರಿಯ ಕ್ರಿಕೆಟ್‌ನಲ್ಲಿ ಉತ್ತಮ ಬ್ಯಾಟಿಂಗ್ ಮಾಡಲಿಲ್ಲ. ಇದು ಕಳವಳದ ವಿಷಯ ಎಂದು ಕಪಿಲ್ ಸುದ್ದಿಸಂಸ್ಥೆಗೆ ಹೇಳಿದರು.

‘ಹಾರ್ದಿಕ್ ಪ್ರತಿಭಾವಂತ ಆಟಗಾರ. ಆಟವನ್ನು ಆಸ್ವಾದಿಸುತ್ತ ಬ್ಯಾಟಿಂಗ್ ಮಾಡಬೇಕು ಪ್ರತಿ ಆಲ್‌ರೌಂಡರ್‌ ಬ್ಯಾಟಿಂಗ್ ಮತ್ತು ಬೌಲಿಂಗ್‌ಗಳ ಪೈಕಿ ಯಾವುದಾದರೂ ಒಂದರಲ್ಲಿ ಹೆಚ್ಚು ಪಾರಮ್ಯ ಹೊಂದಿರುತ್ತಾನೆ. ಬ್ಯಾಟಿಂಗ್‌ ಪಾಂಡ್ಯ ಪಾಲಿನ ಶಕ್ತಿ. ಅದನ್ನು ಅವರು ಉಳಿಸಿಕೊಳ್ಳಬೇಕಾಗಿದೆ. ಇದು ಸಾಧ್ಯವಾದರೆ ಬೌಲಿಂಗ್‌ನಲ್ಲಿ ಸಾಧನೆ ಮಾಡುವುದು ಕಷ್ಟವಲ್ಲ’ ಎಂದು ಕಪಿಲ್‌ದೇವ್ ಹೇಳಿದರು.

ಮುಂದಿನ ವಿಶ್ವಕಪ್‌ ಬಗ್ಗೆ ಮಾತನಾಡಿದ ಅವರು, ‘ನಾಯಕ ವಿರಾಟ್ ಕೊಹ್ಲಿ ಅವರ ಆಕ್ರಮಣಕಾರಿ ಶೈಲಿ ಮತ್ತು ಮಹೇಂದ್ರ ಸಿಂಗ್ ದೋನಿ ಅವರ ಶಾಂತ ಸ್ವಭಾವ ಭಾರತಕ್ಕೆ ಮತ್ತೊಮ್ಮೆ ವಿಶ್ವಕಪ್‌ ತಂದುಕೊಡಬಲ್ಲುದು’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry