ಡೈನಾಮೊಸ್‌ಗೆ ‘ಹ್ಯಾಟ್ರಿಕ್’ ಗುರಿ

7

ಡೈನಾಮೊಸ್‌ಗೆ ‘ಹ್ಯಾಟ್ರಿಕ್’ ಗುರಿ

Published:
Updated:
ಡೈನಾಮೊಸ್‌ಗೆ ‘ಹ್ಯಾಟ್ರಿಕ್’ ಗುರಿ

ನವದೆಹಲಿ: ಸತತ ಐದು ಪಂದ್ಯಗಳಲ್ಲಿ ಅಜೇಯವಾಗಿರುವ ಡೆಲ್ಲಿ ಡೈನಾಮೊಸ್ ತಂಡ ಹ್ಯಾಟ್ರಿಕ್ ಜಯದೊಂದಿಗೆ ಐಎಸ್‌ಎಲ್‌ನ ಈ ಬಾರಿಯ ಅಭಿಯಾನಕ್ಕೆ ಅಂತ್ಯ ಹಾಡಲು ಸಜ್ಜಾಗಿದೆ. ಕಳೆದ ಐದು ಪಂದ್ಯಗಳಲ್ಲಿ ಮೂರು ಜಯ ಮತ್ತು ಎರಡು ಡ್ರಾ ಸಾಧಿಸಿರುವ ಈ ತಂಡ ನಿರಂತರ ಎರಡು ಗೆಲುವು ಸಾಧಿಸಿದೆ.

ಇಲ್ಲಿನ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಶುಕ್ರವಾರ ರಾತ್ರಿ ನಡೆಯಲಿರುವ ಪಂದ್ಯದಲ್ಲಿ ಎಫ್‌ಸಿ ಪುಣೆ ಸಿಟಿ ತಂಡವನ್ನು ಎದುರಿಸಲಿದೆ.

ಪ್ಲೇ ಆಫ್‌ ಹಂತಕ್ಕೇರಲು ವಿಫಲವಾಗಿರುವ ತಂಡಕ್ಕೆ ಈ ಪಂದ್ಯದಲ್ಲಿ ಯಾವುದೇ ಒತ್ತಡ ಇಲ್ಲ. ಕಳೆದ ಪಂದ್ಯದಲ್ಲಿ ಸೋತರೂ ಗೋಲು ಗಳಿಕೆಯ ಆಧಾರದಲ್ಲಿ ಪ್ಲೇ ಆಫ್‌ ಹಂತಕ್ಕೆ ಏರಿರುವ ಪುಣೆ ಸಿಟಿ ತಂಡ ಲಯಕ್ಕೆ ಮರಳಲು ಈ ಪಂದ್ಯ ಸಹಕಾರಿ ಆಗಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry