ಫುಟ್‌ಬಾಲ್‌: ಆರ್‌ಡಬ್ಲ್ಯುಎಫ್‌ ತಂಡಕ್ಕೆ ಜಯ

7

ಫುಟ್‌ಬಾಲ್‌: ಆರ್‌ಡಬ್ಲ್ಯುಎಫ್‌ ತಂಡಕ್ಕೆ ಜಯ

Published:
Updated:

ಬೆಂಗಳೂರು: ರಾಜೇಶ್‌ ತಂದಿತ್ತ ಎರಡು ಗೋಲುಗಳ ಬಲದಿಂದ ರೈಲು ಗಾಲಿ ಕಾರ್ಖಾನೆ (ಆರ್‌ಡಬ್ಲ್ಯುಎಫ್‌) ತಂಡ ಇಲ್ಲಿ ನಡೆಯುತ್ತಿರುವ ಬಿಡಿಎಫ್‌ಎ ವತಿಯ ಸೂಪರ್ ಡಿವಿಷನ್ ಲೀಗ್ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ ಪಂದ್ಯದಲ್ಲಿ ಗುರುವಾರ ಗೆದ್ದಿದೆ.

ಅಶೋಕನಗರ ಕ್ರೀಡಾಂಗಣದಲ್ಲಿ ನಡೆದ ಹಣಾಹಣಿಯಲ್ಲಿ ಆರ್‌ಡಬ್ಲ್ಯುಎಫ್‌ 3–1 ಗೋಲುಗಳಿಂದ ಎಫ್‌ಸಿ ಡೆಕ್ಕನ್ ತಂಡವನ್ನು ಮಣಿಸಿದೆ. ವಿಜಯೀ ತಂಡದ ರಾಜೇಶ್‌ (53, 70ನೇ ನಿ.) ಎರಡು ಗೋಲು ತಂದಿತ್ತರು. ಸತೀಶ್‌ 58ನೇ ನಿಮಿಷದಲ್ಲಿ ಚೆಂಡನ್ನು ಗುರಿ ಸೇರಿಸಿದರು.

ಡೆಕ್ಕನ್ ತಂಡದ ಪರ ಕ್ಲಿಂಟನ್‌ (62ನೇ ನಿ.) ಏಕೈಕ ಗೋಲು ದಾಖಲಿಸಿ ಸೋಲಿನ ಅಂತರ ತಗ್ಗಿಸಿದರು.

‘ಎ’ ಡಿವಿಷನ್ ಪಂದ್ಯದಲ್ಲಿ ಎಜಿಒಆರ್‌ಸಿ ಎಫ್‌ಸಿ 5–0 ಗೋಲುಗಳಿಂದ ರಾಯಲ್ಸ್ ಎಫ್‌ಸಿ ಎದುರು ಗೆದ್ದಿದೆ. ಎಜಿಒಆರ್‌ಸಿ ತಂಡದ ನವೀನ್‌ (54, 61ನೇ ನಿ.) ಎರಡು ಗೋಲು ಗಳಿಸಿದರು. ನಬೀಲ್‌ (28ನೇ ನಿ.), ಪ್ರವೀಣ್‌ (32ನೇ ನಿ.), ಎನ್‌.ಎಸ್‌.ಮಂಜು (40ನೇ ನಿ.) ತಲಾ ಒಂದು ಗೋಲು ಗಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry