ಮಾಲೀಕಯ್ಯರ ಫ್ಲೆಕ್ಸ್: ವರದಿ ಕೇಳಿದ ಕೆಪಿಸಿಸಿ

7

ಮಾಲೀಕಯ್ಯರ ಫ್ಲೆಕ್ಸ್: ವರದಿ ಕೇಳಿದ ಕೆಪಿಸಿಸಿ

Published:
Updated:
ಮಾಲೀಕಯ್ಯರ ಫ್ಲೆಕ್ಸ್: ವರದಿ ಕೇಳಿದ ಕೆಪಿಸಿಸಿ

ಕಲಬುರ್ಗಿ: ‘ಅಫಜಲಪುರ ಕ್ಷೇತ್ರದ ಕಾಂಗ್ರೆಸ್‌ನ ಹಿರಿಯ ಶಾಸಕ ಮಾಲೀಕಯ್ಯ ಗುತ್ತೇದಾರ ಅವರು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರ ಸ್ವಾಗತಕ್ಕೆ ಫ್ಲೆಕ್ಸ್‌ ಹಾಕಿಸಿದ್ದ ಕುರಿತು ವರದಿ ನೀಡುವಂತೆ ಕೆಪಿಸಿಸಿಯಿಂದ ಸೂಚನೆ ಬಂದಿದ್ದು, ವರದಿ ನೀಡುವೆ’ ಎಂದು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಜಗದೇವ ಗುತ್ತೇದಾರ ತಿಳಿಸಿದರು.

ಸಿದ್ದರಾಮಯ್ಯ ಅವರ ಸಚಿವ ಸಂಪುಟದಲ್ಲಿ ಸ್ಥಾನ ಸಿಗದಿದ್ದಾಗ ತಮ್ಮ ಹಿರಿತನಕ್ಕೆ ಮಾನ್ಯತೆ ದೊರೆಯಲಿಲ್ಲ ಎಂದು ಮಾಲೀಕಯ್ಯ ಮುನಿಸಿಕೊಂಡಿದ್ದರು. ಸಂಪುಟ ಪುನಾರಚನೆ ವೇಳೆ ಪ್ರಿಯಾಂಕ್‌ ಖರ್ಗೆ ಅವರಿಗೆ ಸ್ಥಾನ ದೊರೆತ ನಂತರ ಕೆರಳಿದ್ದ ಅವರು, ಮಲ್ಲಿಕಾರ್ಜುನ ಖರ್ಗೆ ಅವರನ್ನು ‘ಪುತ್ರ ವ್ಯಾಮೋಹಿ’ ಎಂದು ಜರಿದಿದ್ದರು.

‘ನಾನು ಕಾಂಗ್ರೆಸ್‌ ಬಿಟ್ಟು ಜೆಡಿಎಸ್‌ ಸೇರುವ ಪ್ರಶ್ನೆಯೇ ಇಲ್ಲ. ನಮ್ಮ ಮಧ್ಯೆ ರಾಜಕೀಯ ಚರ್ಚೆ ನಡೆದಿಲ್ಲ ಎಂದು ದೇವೇಗೌಡರೂ ಸ್ಪಷ್ಟಪಡಿಸಿದ್ದಾರೆ. ಫ್ಲೆಕ್ಸ್‌ ವಿಷಯವಾಗಿ ಕೆಪಿಸಿಸಿ ನನ್ನಿಂದ ವಿವರಣೆಯನ್ನು ಕೇಳಿಲ್ಲ’ ಎಂದು ಶಾಸಕ ಮಾಲೀಕಯ್ಯ ಗುರುವಾರ ‘ಪ್ರಜಾವಾಣಿ’ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry