ಕ್ವಾರ್ಟರ್‌ಗೆ ಡೊಮಿನಿಕ್‌ ಥೀಮ್‌

ಮಂಗಳವಾರ, ಮಾರ್ಚ್ 19, 2019
20 °C

ಕ್ವಾರ್ಟರ್‌ಗೆ ಡೊಮಿನಿಕ್‌ ಥೀಮ್‌

Published:
Updated:
ಕ್ವಾರ್ಟರ್‌ಗೆ ಡೊಮಿನಿಕ್‌ ಥೀಮ್‌

ಅಕಾಪುಲ್ಕೊ (ಮೆಕ್ಸಿಕೊ): ಮೂರನೇ ಶ್ರೇಯಾಂಕದ ಆಸ್ಟ್ರೇಲಿಯಾದ ಆಟಗಾರ ಡೊಮಿನಿಕ್‌ ಥೀಮ್‌ ಮೆಕ್ಸಿಕನ್‌ ಓಪನ್ ಟೆನಿಸ್ ಟೂರ್ನಿಯಲ್ಲಿ ಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ.

ಡೊಮಿನಿಕ್ 6–2, 6–3ರಲ್ಲಿ ನೇರ ಸೆಟ್‌ಗಳಿಂದ ಕೆನಡಾದ ಡೆನಿಸ್‌ ಶಪೊಲೊವ್‌ ಅವರನ್ನು ಮಣಿಸಿದರು. 2016ರಲ್ಲಿ ಇಲ್ಲಿ ಚಾಂಪಿಯನ್ ಆಗಿದ್ದ ಥೀಮ್‌ 76 ನಿಮಿಷಗಳಲ್ಲಿ ಪಂದ್ಯ ಗೆದ್ದುಕೊಂಡರು. ಮುಂದಿನ ಪಂದ್ಯದಲ್ಲಿ ಅವರು ಜುವಾನ್ ಮಾರ್ಟಿನ್ ಡೆಲ್ ಪೊಟ್ರೊ ಎದುರು ಆಡಲಿದ್ದಾರೆ.

‘ಈ ಪಂದ್ಯದಲ್ಲಿ ಗೆದ್ದುಕೊಂಡಿದ್ದಕ್ಕೆ ಖುಷಿಯಾಗಿದೆ. ಡೆನಿಸ್ ಅಪಾಯಕಾರಿ ಆಟಗಾರ. ಅವರ ಎದುರು ಆಡಲು ಸಾಕಷ್ಟು ಸಿದ್ದತೆ ಬೇಕು’ ಎಂದು ಡೊಮಿನಿಕ್ ಹೇಳಿದ್ದಾರೆ. ಅರ್ಜೆಂಟೀನಾದ ಡೆಲ್ ಪೊಟ್ರೊ 6–4, 4–6, 6–3ರಲ್ಲಿ ಸ್ಪೇನ್‌ನ ಡೇವಿಡ್ ಫೆರರ್ ಎದುರು ಗೆದ್ದರು. ಜರ್ಮನಿಯ ಆಟಗಾರ ಅಲೆಕ್ಸಾಂಡರ್‌ ಜ್ವೆರವ್ 7–6, 6–3ರಲ್ಲಿ 7–6, 6–3ರಲ್ಲಿ ಪೀಟರ್‌ ಗೊಜ್ವಿಕ್ ವಿರುದ್ಧ ಜಯ ದಾಖಲಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry