ಕ್ವಾರ್ಟರ್‌ಫೈನಲ್‌ಗೆ ಫೋಗ್ನಿನಿ

7

ಕ್ವಾರ್ಟರ್‌ಫೈನಲ್‌ಗೆ ಫೋಗ್ನಿನಿ

Published:
Updated:
ಕ್ವಾರ್ಟರ್‌ಫೈನಲ್‌ಗೆ ಫೋಗ್ನಿನಿ

ಸಾವೊ ಪಾಲೊ: ಇಟಲಿಯ ಎರಡನೇ ಶ್ರೇಯಾಂಕದ ಆಟಗಾರ ಫ್ಯಾಬಿಯೊ ಫೋಗ್ನಿನಿ ಬ್ರೆಜಿಲ್ ಓಪನ್‌ ಟೆನಿಸ್ ಟೂರ್ನಿಯಲ್ಲಿ ಕ್ವಾರ್ಟರ್‌ಫೈನಲ್ ಪ್ರವೇಶಿಸಿದ್ದಾರೆ.

ಪುರುಷರ ಸಿಂಗಲ್ಸ್ ವಿಭಾಗದ ಪ್ರೀ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಫೋಗ್ನಿನಿ 7–5, 6–1ರಲ್ಲಿ ಪೋರ್ಚುಗಲ್‌ನ ಜೊವೊ ಡೊಮಿನ್‌ಕ್ವೆಸ್‌ ಅವರನ್ನು ಮಣಿಸಿದರು.

ಮುಂದಿನ ಪಂದ್ಯದಲ್ಲಿ ಫೋಗ್ನಿನಿ ಸ್ಪೇನ್‌ನ ಗಾರ್ಸಿಯಾ ಲೊಪೆಜ್ ಅವರನ್ನು ಎದುರಿಸಲಿದ್ದಾರೆ. ಇನ್ನೊಂದು ಪ್ರೀ ಕ್ವಾರ್ಟರ್‌ ಪಂದ್ಯದಲ್ಲಿ ಗಾರ್ಸಿಯಾ 7–6, 4–6, 6–4ರಲ್ಲಿ ಫೆಡೆರಿಕೊ ಡೆಲ್ಬೋನಿಸ್‌ ವಿರುದ್ಧ ಗೆದ್ದರು.

ಉರುಗ್ವೆಯ ಪ್ಯಾಬ್ಲೊ ಕ್ಯುವಾಸ್‌ 6–4, 7–6ರಲ್ಲಿ ಆಸ್ಟ್ರೇಲಿಯಾದ ಸೆಬಾಸ್ಟಿಯನ್ ಆಫ್ನರ್ ವಿರುದ್ಧವೂ, ಲಿಯನಾರ್ಡೊ ಮೇಯ್ನರ್‌ 7–5, 6–4ರಲ್ಲಿ ಕಾರ್ಲೊ ಬೆರ್ಲಾಗ್ ಮೇಲೂ ಜಯದಾಖಲಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry