ತಾಲಿಬಾನ್‌ ಜೊತೆ ಮಾತುಕತೆ ಮಧ್ಯಸ್ಥಿಕೆಗೆ ಸಿದ್ಧ: ಪಾಕಿಸ್ತಾನ

7

ತಾಲಿಬಾನ್‌ ಜೊತೆ ಮಾತುಕತೆ ಮಧ್ಯಸ್ಥಿಕೆಗೆ ಸಿದ್ಧ: ಪಾಕಿಸ್ತಾನ

Published:
Updated:
ತಾಲಿಬಾನ್‌ ಜೊತೆ ಮಾತುಕತೆ ಮಧ್ಯಸ್ಥಿಕೆಗೆ ಸಿದ್ಧ: ಪಾಕಿಸ್ತಾನ

ಇಸ್ಲಾಮಾಬಾದ್: ಅಫ್ಗಾನಿಸ್ತಾನ ಮತ್ತು ತಾಲಿಬಾನ್‌ ಸಂಘಟನೆ ಜತೆ ಮಾತುಕತೆಗೆ ಮಧ್ಯಸ್ಥಿಕೆ ವಹಿಸಲು ಸಿದ್ಧವಿರುವುದಾಗಿ ಪಾಕಿಸ್ತಾನ ಗುರುವಾರ ಘೋಷಿಸಿದೆ.

ಅಫ್ಗಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ ಅವರು ಬುಧವಾರ, ತಾಲಿಬಾನ್ ಸಂಘಟನೆಯನ್ನು ರಾಜಕೀಯ ಸಂಘಟನೆ ಎಂದು ಪರಿಗಣಿಸಲು ಸಿದ್ಧವಿದ್ದು, ಬೇಷರತ್‌ ಮಾತುಕತೆಗೆ ಆಹ್ವಾನಿಸಿದ್ದರು.

ಕಳೆದ 16 ವರ್ಷಗಳಿಂದ ನಡೆಯುತ್ತಿರುವ ಯುದ್ಧದಿಂದ ಅಫ್ಗಾನಿಸ್ತಾನವನ್ನು ಮುಕ್ತಗೊಳಿಸಲು ಘನಿ ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.

‘ಅಫ್ಗನ್‌ ತಾಲಿಬಾನ್‌ ರಾಜಕೀಯ ಸಂಘಟನೆ. ಅಫ್ಗಾನಿಸ್ತಾನ ಸರ್ಕಾರ ಮತ್ತು ತಾಲಿಬಾನ್‌ ನಡುವಿನ ಮಾತುಕತೆಯನ್ನು ಪಾಕಿಸ್ತಾನ ಸ್ವಾಗತಿಸುತ್ತದೆ’ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಖ್ವಾಜಾ ಆಸಿಫ್‌ ಅವರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry