‘ಈ ಬಾರಿ ಕಡು ಬೇಸಿಗೆ ಇಲ್ಲ’

7

‘ಈ ಬಾರಿ ಕಡು ಬೇಸಿಗೆ ಇಲ್ಲ’

Published:
Updated:

ನವದೆಹಲಿ: ಬೆಂಗಳೂರು ಸೇರಿದಂತೆ ದಕ್ಷಿಣ ಕರ್ನಾಟಕದಲ್ಲಿ ಈ ಬಾರಿ ಕಡು ಬೇಸಿಗೆ ಇರುವುದಿಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕರ್ನಾಟಕದ ದಕ್ಷಿಣ ಒಳನಾಡು, ರಾಯಲಸೀಮಾ, ತಮಿಳುನಾಡು ಮತ್ತು ಪುದುಚೇರಿ ಹಾಗೂ ನಾಲ್ಕು ಈಶಾನ್ಯ ರಾಜ್ಯಗಳು ಈ ಬಾರಿಯ ಬೇಸಿಗೆ ಅವಧಿಯಲ್ಲಿನ ಅತ್ಯಂತ ತಂಪಾದ ಪ್ರದೇಶಗಳಾಗಿವೆ. ಈ ಪ್ರದೇಶಗಳಲ್ಲಿನ ಸರಾಸರಿ ತಾಪಮಾನದಲ್ಲಿ ಹೆಚ್ಚಿನ ಬದಲಾವಣೆಗಳು ಕಂಡು ಬರುವುದಿಲ್ಲ ಎಂದು ತಿಳಿಸಿದೆ.

ಆದರೆ, ದೇಶದ ಉಳಿದ ಭಾಗಗಳಲ್ಲಿ ಕಡು ಬೇಸಿಗೆ ಇರಲಿದೆ. ಅದರಲ್ಲೂ ಮಧ್ಯ ಭಾಗ ಮತ್ತು ಉತ್ತರ ರಾಜ್ಯಗಳಲ್ಲಿ ಅತಿ ಹೆಚ್ಚು ತಾಪಮಾನ ಇರಲಿದೆ.  ಸರಾಸರಿ ತಾಪಮಾನಕ್ಕಿಂತ ಹೆಚ್ಚಿನ ಉಷ್ಣಾಂಶ ಈ ಪ್ರದೇಶಗಳಲ್ಲಿ ಕಂಡು ಬರಲಿದೆ ಎಂದು ಇಲಾಖೆ ವಿವರಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry