ಮನೆಗೆ ಮರಳಿದ ಪರ್‍ರೀಕರ್

ಗುರುವಾರ , ಮಾರ್ಚ್ 21, 2019
30 °C

ಮನೆಗೆ ಮರಳಿದ ಪರ್‍ರೀಕರ್

Published:
Updated:
ಮನೆಗೆ ಮರಳಿದ ಪರ್‍ರೀಕರ್

ಪಣಜಿ: ಅನಾರೋಗ್ಯದಿಂದಾಗಿ ಫೆಬ್ರುವರಿ 25ರಂದು ಆಸ್ಪತ್ರೆಗೆ ದಾಖಲಾಗಿದ್ದ ಗೋವಾ ಮುಖ್ಯಮಂತ್ರಿ ಮನೋಹರ್ ಪರ್‍ರೀಕರ್ ಗುರುವಾರ ಮನೆಗೆ ವಾಪಸಾಗಿದ್ದಾರೆ.

‘ಮನೆಗೆ ಮರಳಿರುವುದಕ್ಕೆ ಸಂತಸವಾಗುತ್ತಿದೆ. ನಿಮ್ಮೆಲ್ಲರ ಶುಭಹಾರೈಕೆಗಳಿಗೆ ಧನ್ಯವಾದ’ ಎಂದು ಆಸ್ಪತ್ರೆಯಿಂದ ಮರಳಿದ ನಂತರ ಪರ್‍ರೀಕರ್ ಟ್ವೀಟ್‌ ಮಾಡಿದ್ದಾರೆ.

ಮೊದಲು ಹೊಟ್ಟೆನೋವಿನಿಂದಾಗಿ ಫೆಬ್ರುವರಿ 15ರಂದು ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಾಗಿದ್ದ ಪರ್‍ರೀಕರ್ ಅವರಿಗೆ ಮೇದೋಜೀರಕದ ಉರಿಯೂತಕ್ಕೆ ಚಿಕಿತ್ಸೆ ನೀಡಲಾಗಿತ್ತು. ಅಲ್ಲಿಂದ ಅವರು ಫೆಬ್ರುವರಿ 22ರಂದು ಮನೆಗೆ ಮರಳಿದ್ದರು.

ಫೆಬ್ರುವರಿ 19ರಂದು ಆರಂಭವಾಗಿದ್ದ ಗೋವಾ ವಿಧಾನಸಭೆ ಅಧಿವೇಶನವನ್ನು ಪರ್‍ರೀಕರ್ ಅವರ ಅನಾರೋಗ್ಯದಿಂದಾಗಿ ನಾಲ್ಕು ದಿನಕ್ಕೆ ಮೊಟಕುಗೊಳಿಸಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry