ಸಂವಹನ ನಿರ್ದೇಶಕಿ ಹುದ್ದೆಗೆ ಹಿಕ್ಸ್‌ ರಾಜೀನಾಮೆ

6

ಸಂವಹನ ನಿರ್ದೇಶಕಿ ಹುದ್ದೆಗೆ ಹಿಕ್ಸ್‌ ರಾಜೀನಾಮೆ

Published:
Updated:
ಸಂವಹನ ನಿರ್ದೇಶಕಿ ಹುದ್ದೆಗೆ ಹಿಕ್ಸ್‌ ರಾಜೀನಾಮೆ

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಆಡಳಿತದಲ್ಲಿ ಉನ್ನತ ಹುದ್ದೆಗಳಿಗೆ ರಾಜೀನಾಮೆ ನೀಡುವ ಪರ್ವ ಮುಂದುವರಿದಿದೆ.

ಟ್ರಂಪ್‌ ಅವರ ವಿಶ್ವಾಸಾರ್ಹ, ಪರಮಾಪ್ತೆಯಾಗಿರುವ ಶ್ವೇತಭವನದ ಸಂವಹನ ನಿರ್ದೇಶಕಿ ಹೋಪ್‌ ಹಿಕ್ಸ್‌ ಗುರುವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಕಳೆದ ಮೂರು ವರ್ಷಗಳಿಂದ ಹಿಕ್ಸ್‌ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದರು. 2017ರ ಜನವರಿ 20ರಂದು ಟ್ರಂಪ್‌ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಪ್ರಚಾರಾಂದೋಲನ ವಕ್ತಾರೆಯಾಗಿ ಹಿಕ್ಸ್‌ ನೇಮಕಗೊಂಡಿದ್ದರು.

ಸಂವಹನ ನಿರ್ದೇಶಕಿಯಾಗುವ ಮುನ್ನ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿಯಾಗಿಯೂ ಅವರು ಕಾರ್ಯನಿರ್ವಹಿಸಿದ್ದರು. ಮಾಜಿ ರೂಪದರ್ಶಿಯೂ ಆಗಿದ್ದ 29 ವರ್ಷದ ಹಿಕ್ಸ್‌, ಟ್ರಂಪ್‌ ಅವರ ಕಂಪನಿಯಲ್ಲಿ ಉದ್ಯೋಗಿಯೂ ಆಗಿದ್ದರು.

2016ರ ಅಧ್ಯಕ್ಷೀಯ ಚುನಾವಣೆಯಲ್ಲಿ ರಷ್ಯಾ ಹಸ್ತಕ್ಷೇಪ ಮಾಡಿರುವ ಬಗ್ಗೆ ತನಿಖೆ ನಡೆಸುತ್ತಿರುವ ಸಮಿತಿಯು, ಬುಧವಾರ ಸುಮಾರು 9 ಗಂಟೆಗಳ ಕಾಲ ಹಿಕ್ಸ್‌ ಅವರ ವಿಚಾರಣೆ ನಡೆಸಿತ್ತು. ಇದಾದ ಬಳಿಕ, ಹಿಕ್ಸ್‌ ರಾಜೀನಾಮೆ ನೀಡಿರುವುದು ಗಮನಾರ್ಹವಾಗಿದೆ.

ಕೆಲವು ಸಂದರ್ಭಗಳಲ್ಲಿ ಸುಳ್ಳು ಹೇಳಿರಬಹುದು. ಆದರೆ, ಚುನಾವಣೆಯಲ್ಲಿ ರಷ್ಯಾದ ಹಸ್ತಕ್ಷೇಪಕ್ಕೆ ಸಂಬಂಧಿಸಿದಂತೆ ಯಾವುದೇ ಸುಳ್ಳು ಹೇಳಿಕೆಗಳನ್ನು ನೀಡಿಲ್ಲ’ ಎಂದು ಹಿಕ್ಸ್‌ ಸಮಿತಿ ಮುಂದೆ ತಿಳಿಸಿದ್ದರು.

ಹಿಕ್ಸ್‌ ಅವರ ಕಾರ್ಯವೈಖರಿಯನ್ನು ಟ್ರಂಪ್‌ ಶ್ಲಾಘಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry