ಸೂಚ್ಯಂಕ 137 ಅಂಶ ಇಳಿಕೆ

7

ಸೂಚ್ಯಂಕ 137 ಅಂಶ ಇಳಿಕೆ

Published:
Updated:
ಸೂಚ್ಯಂಕ 137 ಅಂಶ ಇಳಿಕೆ

ಮುಂಬೈ: ಆರ್ಥಿಕ ವೃದ್ಧಿದರ ಪ್ರಗತಿದಾಯಕವಾಗಿದ್ದರೂ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಗುರುವಾರದ ವಹಿವಾಟಿನಲ್ಲಿ 137 ಅಂಶ ಕಳೆದುಕೊಂಡು 34,046 ಅಂಶಗಳಲ್ಲಿ ವಹಿವಾಟು ಅಂತ್ಯಗೊಳಿಸಿತು.

ಅಮೆರಿಕದ ಕೇಂದ್ರೀಯ ಬ್ಯಾಂಕ್‌ ಬಡ್ಡಿದರ ಹೆಚ್ಚಳ ಮಾಡುವ ಸುಳಿವು ನೀಡಿರುವುದು, ಮೂರನೇ ತ್ರೈಮಾಸಿಕದಲ್ಲಿನ ಜಿಡಿಪಿ ಹೆಚ್ಚಳ ಮೂಡಿಸಿದ್ದ ಉತ್ಸಾಹವನ್ನು ಮಂಕಾಗಿಸಿತು.

ಬ್ಯಾಂಕ್‌ಗಳ ವಂಚನೆ ಪ್ರಕರಣದಿಂದ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳ ಷೇರು ಖರೀದಿಗೆ ಹೂಡಿಕೆದಾರರು ಹಿಂದೇಟು ಹಾಕುತ್ತಿರುವುದು ಸೂಚ್ಯಂಕ ಕುಸಿತಕ್ಕೆ ಕಾರಣವಾಯಿತು.

ಆಟೊಮೊಬೈಲ್‌ ಕ್ಷೇತ್ರದ ಆಯ್ದ ಷೇರುಗಳಿಗೆ ಅಲ್ಪ ಪ್ರಮಾಣದಲ್ಲಿ ಬೇಡಿಕೆ ವ್ಯಕ್ತವಾಯಿತು. ಹೀಗಾಗಿ ಫೆಬ್ರುವರಿ ತಿಂಗಳಲ್ಲಿ ಇಳಿಕೆಯಾಗಿದ್ದ ಷೇರುಗಳ ಮೌಲ್ಯವು ಮುಂಬರುವ ದಿನಗಳಲ್ಲಿ ಹೆಚ್ಚಾಗುವ ನಿರೀಕ್ಷೆ ಇದೆ.

ಒಂದು ಹಂತದಲ್ಲಿ 34,278 ಅಂಶಗಳ ಗರಿಷ್ಠ ಮಟ್ಟಕ್ಕೆ ತಲುಪಿದ್ದ ಸೂಚ್ಯಂಕವು ಖರೀದಿ ಉತ್ಸಾಹ ಕುಗ್ಗಿದ್ದರಿಂದ 34,015 ಅಂಶಗಳ ಕನಿಷ್ಠ ಮಟ್ಟಕ್ಕೂ ಕುಸಿದಿತ್ತು.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ನಿಫ್ಟಿ) ಕೂಡ 34.50 ಅಂಶಗಳನ್ನು ಕಳೆದುಕೊಂಡು 10,458 ಅಂಶಗಳಲ್ಲಿ ವಹಿವಾಟು ಕೊನೆಗೊಳಿಸಿತು. ಒಂದು ಹಂತದಲ್ಲಿ 10,447 ಅಂಶಗಳ ಕನಿಷ್ಠ ಮಟ್ಟಕ್ಕೆ ಕುಸಿದಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry