ಅಫ್ಗನ್‌ ರಾಯಭಾರಿಯಾಗಿ ವಿನಯ್‌ ಕುಮಾರ್ ನೇಮಕ

7

ಅಫ್ಗನ್‌ ರಾಯಭಾರಿಯಾಗಿ ವಿನಯ್‌ ಕುಮಾರ್ ನೇಮಕ

Published:
Updated:

ನವದೆಹಲಿ: ಅಫ್ಗಾನಿಸ್ತಾನಕ್ಕೆ ಭಾರತದ ರಾಯಭಾರಿಯನ್ನಾಗಿ ಹಿರಿಯ ಅಧಿಕಾರಿ ವಿನಯ್ ಕುಮಾರ್ ಅವರನ್ನು ನೇಮಕ ಮಾಡಲಾಗಿದೆ.

1992ನೇ ಸಾಲಿನ ಭಾರತೀಯ ವಿದೇಶ ಸೇವೆ ಅಧಿಕಾರಿ ವಿನಯ್‌ ಕುಮಾರ್‌ ಅವರು ಪ್ರಸ್ತುತ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕೇಂದ್ರ ಕಚೇರಿಯಲ್ಲಿ ಜಂಟಿ ನಿರ್ದೇಶಕ (ದಕ್ಷಿಣ) ಹುದ್ದೆಯಲ್ಲಿದ್ದಾರೆ.

‘ಕುಮಾರ್ ಅವರು ಶೀಘ್ರದಲ್ಲೇ ತಮ್ಮ ಹೊಸ ಜವಾಬ್ದಾರಿ ಸ್ವೀಕರಿಸಲಿದ್ದಾರೆ’ ವಿದೇಶಾಂಗ ಸಚಿವಾಲಯದ ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry