ಮೂಲ ಸೌಕರ್ಯ ವಲಯದ ಪ್ರಗತಿ

ಮಂಗಳವಾರ, ಮಾರ್ಚ್ 19, 2019
28 °C

ಮೂಲ ಸೌಕರ್ಯ ವಲಯದ ಪ್ರಗತಿ

Published:
Updated:
ಮೂಲ ಸೌಕರ್ಯ ವಲಯದ ಪ್ರಗತಿ

ನವದೆಹಲಿ: ಎಂಟು ಪ್ರಮುಖ ಮೂಲ ಸೌಕರ್ಯ ವಲಯಗಳು ಜನವರಿ ತಿಂಗಳಲ್ಲಿ ಶೇ 6.7ರಷ್ಟು ತ್ವರಿತ ಬೆಳವಣಿಗೆ ದಾಖಲಿಸಿವೆ.

ಕಳೆದ ವರ್ಷ ಇದೇ ತಿಂಗಳಲ್ಲಿ ಶೇ 3.4ರಷ್ಟು ಪ್ರಗತಿ ಸಾಧಿಸಿದ್ದ ಈ ವಲಯಗಳ ಬೆಳವಣಿಗೆಯು ಈ ವರ್ಷ ಹೆಚ್ಚಾಗಿದೆ. ತೈಲಾಗಾರ ಉತ್ಪನ್ನಗಳು ಮತ್ತು ಸಿಮೆಂಟ್‌ ತಯಾರಿಕಾ ವಲಯಗಳು ಗಣನೀಯ ಪ್ರಗತಿ ಕಂಡಿವೆ. ಉಕ್ಕು ಮತ್ತು ಅದಿರು ಉತ್ಪನ್ನಗಳೂ  ಪ್ರಗತಿ ಸಾಧಿಸಿವೆ.

ಗಣಿಗಾರಿಕೆ, ಕಚ್ಚಾತೈಲ, ನೈಸರ್ಗಿಕ ಅನಿಲ, ರಸಗೊಬ್ಬರ, ಉಕ್ಕು, ಸಿಮೆಂಟ್‌, ತೈಲಾಗಾರ ಉತ್ಪನ್ನಗಳು ಮತ್ತು ವಿದ್ಯುತ್‌ ವಲಯಗಳ ಬೆಳವಣಿಗೆ ದರವು ಡಿಸೆಂಬರ್‌ನಲ್ಲಿ ಶೇ 4.2ರಷ್ಟು ಮತ್ತು ನವೆಂಬರ್‌ನಲ್ಲಿ ಶೇ 7.4ರಷ್ಟು ಹೆಚ್ಚಳವಾಗಿತ್ತು.

ಆದರೆ ಕಚ್ಚಾತೈಲ, ರಸಗೊಬ್ಬರ ಮತ್ತು ನೈಸರ್ಗಿಕ ಅನಿಲ ವಲಯಗಳ ಪ್ರಗತಿ ಇಳಿಕೆಯಾಗಿದೆ. ಈ ವಲಯಗಳ ಪ್ರಗತಿಯು 2017ರ ಆರ್ಥಿಕ ವರ್ಷದ ಏಪ್ರಿಲ್‌–ಜನವರಿ ಅವಧಿಯಲ್ಲಿ ಶೇ 4.3ರಷ್ಟು ಏರಿಕೆಯಾಗಿತ್ತು. 2016ರ ಆರ್ಥಿಕ ವರ್ಷದಲ್ಲಿ ಶೇ 5.1ರಷ್ಟು ಹೆಚ್ಚಳವಾಗಿತ್ತು.

ಈ ಎಂಟೂ ಮೂಲ ಸೌಕರ್ಯ ವಲಯಗಳ ಅಭಿವೃದ್ಧಿ ದರ ಹೆಚ್ಚಳವಾಗುವುದರಿಂದ ಕೈಗಾರಿಕಾ ಉತ್ಪಾದನಾ ಸೂಚ್ಯಂಕ ಮಟ್ಟ ಏರಿಕೆಯಾಗಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry