ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರುಕಟ್ಟೆಗೆ ನೂರ್‌ಕ್ರಿನ್

Last Updated 1 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಔಷಧಿ ತಯಾರಿಕಾ ಸಂಸ್ಥೆ ಗ್ಲೆನ್‌ಮಾರ್ಕ್, ಮಹಿಳೆಯರಿಗೆಂದೇ ಪ್ರತ್ಯೇಕವಾಗಿ ತಯಾರಿಸಲಾದ ತಲೆಗೂದಲು ಬೆಳೆಯಲು ನೆರವಾಗುವ ‘ನೂರ್‌ಕ್ರಿನ್‌ ವುಮೆನ್’ ಔಷಧಿಯನ್ನು ದೇಶಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಈ ಸಂಬಂಧ ಡೆನ್ಮಾರ್ಕ್‌ನ ಫಾರ್ಮಾ ಮೆಡಿಕೊ ಸಂಸ್ಥೆಯೊಂದಿಗೆ ಗ್ಲೆನ್‌ಮಾರ್ಕ್‌ ಒಪ್ಪಂದ ಮಾಡಿಕೊಂಡಿದೆ. ನಿರ್ದಿಷ್ಟ ಮಳಿಗೆಗಳಲ್ಲಿ ಮಾತ್ರ ಮಾರಾಟ ಮಾಡಲಿದೆ. ಮಹಿಳೆಯರ ವೈಯಕ್ತಿಕ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಚರ್ಮ ತಜ್ಞರ ಸಲಹೆ ಮೇರೆಗೆ ಈ ಔಷಧಿ ಬಳಸಬಹುದಾಗಿದೆ.

‘ಭಾರತದಲ್ಲಿ 9 ಕೋಟಿಗೂ ಹೆಚ್ಚು ಮಹಿಳೆಯರು ಕೂದಲು ಉದುರುವಿಕೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದಕ್ಕೆ ಅನುವಂಶೀಯತೆ, ಪೌಷ್ಟಿಕಾಂಶ ಕೊರತೆ, ಒತ್ತಡದಂತಹ ಹಲವು ಕಾರಣಗಳಿವೆ. ಈ ಸಮಸ್ಯೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಔಷಧಿ ತಯಾರಿಸಲಾಗಿದೆ’ ಎಂದು ಸಂಸ್ಥೆಯ ಮಾರಾಟ ಮತ್ತು ಮಾರುಕಟ್ಟೆ ವಿಭಾಗದ ಹಿರಿಯ ಉಪಾಧ್ಯಕ್ಷ ರಾಜೇಶ್‌ ಕಪೂರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ವಿಶ್ವದಾದ್ಯಂತ 20ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಈ ಔಷಧಿಯನ್ನು ಮಾರಾಟ ಮಾಡಲಾಗುತ್ತಿದೆ. ಇಪ್ಪತ್ತು ವರ್ಷಗಳಿಂದ ಈ ಔಷಧಿಯನ್ನು ಗ್ರಾಹಕರು ಬಳಸುತ್ತಿದ್ದಾರೆ. ಯಾವುದೇ ಅಡ್ಡ ಪರಿಣಾಮಗಳು ಇಲ್ಲ. ಇದರ ತಯಾರಿಕೆಗೆ ವಿಷಯುಕ್ತ ರಾಸಾಯನಿಕಗಳನ್ನೂ ಬಳಸಿಲ್ಲ. ಹಲವು ವೈದ್ಯಕೀಯ ನಿಯತಕಾಲಿಕೆಗಳಲ್ಲಿ ಈ ಔಷಧಿ ಬಗೆಗಿನ ಸಂಶೋಧನಾ ವರದಿಗಳು ಪ್ರಕಟಗೊಂಡಿವೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT