‘ಪಾಕ್‌ ಜೊತೆ ಮಾತುಕತೆ ಅಗತ್ಯ’

ಶನಿವಾರ, ಮಾರ್ಚ್ 23, 2019
34 °C

‘ಪಾಕ್‌ ಜೊತೆ ಮಾತುಕತೆ ಅಗತ್ಯ’

Published:
Updated:
‘ಪಾಕ್‌ ಜೊತೆ ಮಾತುಕತೆ ಅಗತ್ಯ’

ನವದೆಹಲಿ: ಪಾಕಿಸ್ತಾನದ ವಿರುದ್ಧ ಆಕ್ರಮಣಕಾರಿ ನಿಲುವನ್ನು ತ್ಯಜಿಸಿ, ಮಾತುಕತೆಗೆ ಭಾರತ ಮುಂದಾಗಬೇಕು ಎಂದು ಸಿಪಿಎಂ ಗುರುವಾರ ಹೇಳಿದೆ.

ಸಿಪಿಎಂನ ಮುಖವಾಣಿ ‘ಪೀಪಲ್ಸ್ ಡೆಮಾಕ್ರಸಿ’ಯಲ್ಲಿ ಪಕ್ಷದ ಮಾಜಿ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ಅವರು ಬರೆದ ಸಂಪಾದಕೀಯದಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿದ್ದಾರೆ.

‘ಪಾಕಿಸ್ತಾನದ ಜೊತೆಗಿನ ಮಾತುಕತೆಯ ಎಲ್ಲಾ ಮಾರ್ಗಗಳನ್ನು ಸರ್ಕಾರವೇ ಮುಚ್ಚಿರುವುದರಿಂದ ಈ ವಿಚಾರವು ಮೂಲೆಗುಂಪಾಗುವಂತೆ ಮಾಡಿದೆ. ಅಂತರರಾಷ್ಟ್ರೀಯ ಗಡಿ ನಿಯಂತ್ರಣ ರೇಖೆಯಲ್ಲಿ ಕದನವಿರಾಮ ಪುನಃಸ್ಥಾಪಿಸಿ, ಶಾಂತಿ ಕಾಪಾಡುವ ನಿಟ್ಟಿನಲ್ಲಿ ಭಾರತ ಮಾತುಕತೆ ಆರಂಭಿಸುವುದು ಅಗತ್ಯವಾಗಿದೆ’ ಎಂದು ಅವರು ಉಲ್ಲೇಖಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry