ಸಾಲಗಳ ಮೇಲಿನ ಬಡ್ಡಿ ದರ ಹೆಚ್ಚಳ

7

ಸಾಲಗಳ ಮೇಲಿನ ಬಡ್ಡಿ ದರ ಹೆಚ್ಚಳ

Published:
Updated:
ಸಾಲಗಳ ಮೇಲಿನ ಬಡ್ಡಿ ದರ ಹೆಚ್ಚಳ

ಮುಂಬೈ: ಸರ್ಕಾರಿ ಸ್ವಾಮ್ಯದ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ), ಪಂಜಾಬ್‌ ನ್ಯಾಷನಲ್‌ ಬ್ಯಾಂಕ್ (ಪಿಎನ್‌ಬಿ) ಮತ್ತು ಖಾಸಗಿ ವಲಯದ ಐಸಿಐಸಿಐ ಬ್ಯಾಂಕ್‌ ಸಾಲಗಳ ಮೇಲಿನ ಬಡ್ಡಿ ದರವನ್ನು ಹೆಚ್ಚಿಸಿವೆ.

ಎಸ್‌ಬಿಐ ಶೇ 0.20, ಪಿಎನ್‌ಬಿ ಮತ್ತು ಐಸಿಐಸಿಐ ಬ್ಯಾಂಕ್‌ ಶೇ 0.15ರಷ್ಟು ಬಡ್ಡಿ ದರ ಹೆಚ್ಚಿಸಿವೆ. ಹೊಸ ದರಗಳು ತಕ್ಷಣದಿಂದಲೇ ಜಾರಿಗೆ ಬಂದಿವೆ ಎಂದು ಈ ಬ್ಯಾಂಕ್‌ಗಳು ತಿಳಿಸಿವೆ. ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿ ನಗದು ಪೂರೈಕೆ ಕಡಿಮೆಯಾಗಿರುವ ಕಾರಣಕ್ಕೆ ಎಸ್‌ಬಿಐ ನಿನ್ನೆಯಷ್ಟೇ ಠೇವಣಿಗಳ ಮೇಲಿನ ಬಡ್ಡಿ ದರಗಳನ್ನು ಶೇ 0.75ರವರೆಗೆ ಹೆಚ್ಚಿಸಿತ್ತು.

ಅದರ ಬೆನ್ನಲ್ಲೇ, ಈಗ ಸಾಲಗಳ ಮೇಲಿನ ಬಡ್ಡಿ ದರಗಳನ್ನು ಶೇ 0.20ರಷ್ಟು (ಶೇ 8.15ಕ್ಕೆ) ಹೆಚ್ಚಿಸಿದೆ. 2016ರ ಏಪ್ರಿಲ್‌ 1ರಿಂದೀಚೆಗೆ ಪಡೆದಿರುವ ಮತ್ತು ಹೊಸದಾಗಿ ಪಡೆಯುವ ಗೃಹ, ಕಾರು, ಶಿಕ್ಷಣ ಮತ್ತು ವೈಯಕ್ತಿಕ ಸಾಲಗಳಿಗೆ ಈ ಹೊಸ ಬಡ್ಡಿ ದರ ಅನ್ವಯವಾಗಲಿದೆ. 2016ರ ಏಪ್ರಿಲ್‌ ನಂತರ ಬ್ಯಾಂಕ್‌ ಇದೇ ಮೊದಲ ಬಾರಿಗೆ ಬಡ್ಡಿ ದರ ಹೆಚ್ಚಿಸುವ ನಿರ್ಧಾರ ಕೈಗೊಂಡಿದೆ.

2017ರ ನವೆಂಬರ್‌ ತಿಂಗಳಿನಿಂದೀಚೆಗೆ ಮೂರನೇ ಬಾರಿಗೆ ಠೇವಣಿಗಳ ಮೇಲಿನ ಬಡ್ಡಿ ದರ ಹೆಚ್ಚಿಸಿದೆ. ಠೇವಣಿಗಳ ಮೇಲಿನ ಬಡ್ಡಿ ದರ ಹೆಚ್ಚಳ ನಿರ್ಧಾರವು, ಬ್ಯಾಂಕ್‌ ಶೀಘ್ರದಲ್ಲಿಯೇ ಸಾಲಗಳ ಮೇಲಿನ ಬಡ್ಡಿ ದರವನ್ನೂ ಹೆಚ್ಚಿಸಲಿದೆ ಎನ್ನುವ ಸುಳಿವು ನೀಡಿತ್ತು. ಇತರ ಬ್ಯಾಂಕ್‌ಗಳೂ ಈಗ ಇದೇ ಹಾದಿ ತುಳಿಯುತ್ತಿವೆ.

‘ಎಸ್‌ಬಿಐ’ನ ಠೇವಣಿಗಳ ಮೇಲಿನ ಹೆಚ್ಚುವರಿ ವೆಚ್ಚ ಆಧರಿಸಿದ  (ಎಂಸಿಎಲ್‌ಆರ್‌) ಬಡ್ಡಿ ದರವು ಇದಕ್ಕೂ ಮೊದಲು ಶೇ 7.95ರಷ್ಟಿತ್ತು. ಅದು ಈಗ ಶೇ 8.15ರಷ್ಟಾಗಲಿದೆ. ‘ಪಿಎನ್‌ಬಿ’ ಬಡ್ಡಿ ದರ ಈಗ ಶೇ 8.30ರಷ್ಟಾಗಲಿದೆ. ಬ್ಯಾಂಕ್‌ ತನ್ನ ಠೇವಣಿಗಳ ಮೇಲಿನ ಬಡ್ಡಿ ದರವನ್ನೂ ಶೇ 0.45ರಷ್ಟು ಹೆಚ್ಚಿಸಿದೆ. ಬ್ಯಾಂಕ್‌ನ ವಿವಿಧ ಸಾಲಗಳ ಮೇಲಿನ ಬಡ್ಡಿ ದರವು ಈಗ ‘ಎಂಸಿಎಲ್‌ಆರ್‌’ ಆಧರಿಸಿರುತ್ತದೆ.

ಬ್ಯಾಂಕ್  ಹೆಚ್ಚಳ (%) ಬಡ್ಡಿ ದರ (%)

ಎಸ್‌ಬಿಐ 0.20 8.20

ಪಿಎನ್‌ಬಿ 0.15 8.30

ಐಸಿಐಸಿಐ ಬ್ಯಾಂಕ್‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry