ನೌಕಾ ಪಡೆ ಸಮರಾಭ್ಯಾಸ ಮುಕ್ತಾಯ

7

ನೌಕಾ ಪಡೆ ಸಮರಾಭ್ಯಾಸ ಮುಕ್ತಾಯ

Published:
Updated:

ಮುಂಬೈ: ಅರಬ್ಬಿ ಸಮುದ್ರದಲ್ಲಿ ಭಾರತೀಯ ನೌಕಾಪಡೆ ಮೂರು ವಾರಗಳ ಕಾಲ ಕೈಗೊಂಡ ಸಮರಾಭ್ಯಾಸ ಕೊನೆಗೊಂಡಿದೆ. ದೇಶದ ಪಶ್ಚಿಮ ಸಮುದ್ರದಲ್ಲಿರುವ ಪ್ರತಿಕೂಲ ಸನ್ನಿವೇಶಗಳನ್ನು ಎದುರಿಸುವ ಕುರಿತು ವ್ಯೂಹ ರಚನೆ ಮತ್ತು ಯುದ್ಧದ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕಾರ್ಯಾಚರಣೆ ಯೋಜನೆಗಳ ಬಗ್ಗೆ ನೌಕಾ ಪಡೆ ಪರೀಕ್ಷೆಗಳನ್ನು ಕೈಗೊಂಡಿತು.

ಪಶ್ಚಿಮ ಕಡಲ ತೀರದಲ್ಲಿರುವ ತೈಲ ಬಾವಿಗಳು, ಸರಕು ಸಾಗಣೆ ಹಡಗುಗಳಿಗೆ ಭದ್ರತೆ ನೀಡುವ ವಿಷಯಗಳ ಬಗ್ಗೆ ನೌಕಾಪಡೆ ಪೂರ್ವ ತಯಾರಿ ನಡೆಸಿತು ಎಂದು ಭಾರತೀಯ ನೌಕಾಪಡೆ ಗುರುವಾರ ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಿದೆ.

‘ಪಶ್ಚಿಮ ಲೆಹರ್‌‘ ಹೆಸರಿನಡಿ ಕೈಗೊಂಡ ಸಮರಾಭ್ಯಾಸದಲ್ಲಿ ವಿಮಾನ ವಾಹಕ ನೌಕೆ ಐಎನ್‌ಎಸ್‌ ವಿಕ್ರಮಾದಿತ್ಯ, ಹೊಸದಾಗಿ ಸೇರ್ಪಡೆಗೊಂಡ ಕಲ್ಕತ್ತಾ ಕ್ಲಾಸ್‌ ಮಾದರಿಯ ಯುದ್ಧ ನೌಕೆ, ಜಲಂತರ್ಗಾಮಿಗಳುಸಮರಾಭ್ಯಾಸದಲ್ಲಿ ಪಾಲ್ಗೊಂಡಿದ್ದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry