ರೈಲಿನಲ್ಲಿ ಸರಳ ಮದುವೆ ಮಾಡಿಸಿದ ಶ್ರೀಶ್ರೀ ರವಿಶಂಕರ್‌!

ಬುಧವಾರ, ಮಾರ್ಚ್ 27, 2019
22 °C

ರೈಲಿನಲ್ಲಿ ಸರಳ ಮದುವೆ ಮಾಡಿಸಿದ ಶ್ರೀಶ್ರೀ ರವಿಶಂಕರ್‌!

Published:
Updated:
ರೈಲಿನಲ್ಲಿ ಸರಳ ಮದುವೆ ಮಾಡಿಸಿದ ಶ್ರೀಶ್ರೀ ರವಿಶಂಕರ್‌!

ನವದೆಹಲಿ: ಸರಳ ಮದುವೆಗೆ ಉದಾಹರಣೆಯಾಗಿ ರೈಲಿನಲ್ಲಿ ಮದುವೆಯೊಂದು ನಡೆದಿದ್ದು, ಆರ್ಟ್‌ ಆಫ್‌ ಲಿವಿಂಗ್‌ನ ಶ್ರೀ ಶ್ರೀ ರವಿಶಂಕರ್ ಈ ಮದುವೆಯನ್ನು ಶಾಸ್ತ್ರೋಕ್ತವಾಗಿ ನಡೆಸಿಕೊಟ್ಟಿದ್ದಾರೆ.

‘ಫಾರ್ಮಸಿಸ್ಟ್‌ ಆಗಿರುವ ಸಚಿನ್‌ ಕುಮಾರ್ ಮತ್ತು ಕಂದಾಯ ಇಲಾಖೆ ಉದ್ಯೋಗಿ ಜ್ಯೋತ್ಸ್ನಾ ಉತ್ತರ ಪ್ರದೇಶದ ಗೋರಖ್‌ಪುರ ಮತ್ತು ಲಖನೌ ನಡುವೆ ಸಂಚರಿಸುತ್ತಿದ್ದ ರೈಲಿನಲ್ಲಿ ಈ ಮದುವೆಯಾಗಿದ್ದಾರೆ’ ಎಂದು ರೈಲ್ವೆ ಪ್ರಕಟಣೆ ತಿಳಿಸಿದೆ.

‘ಮದುವೆ ಸರಳವಾಗಿರಬೇಕು ಎಂಬ ಸಂದೇಶವನ್ನು ಈ ಮೂಲಕ ಎಲ್ಲೆಡೆ ಸಾರಲು ಇಚ್ಛಿಸುತ್ತೇನೆ. ಈ ರೀತಿ ಮದುವೆಯಾದರೆ ಲಕ್ಷಾಂತರ ರೂಪಾಯಿ ಖರ್ಚು ಮಾಡುವುದು, ಮದುವೆಗಾಗಿ ಸಾಲ ಮಾಡುವುದನ್ನು ತಪ್ಪಿಸಬಹುದು’  ಎಂದು ‘ಆರ್ಟ್‌ ಆಫ್‌ ಲಿವಿಂಗ್’ ಬಿಡುಗಡೆ ಮಾಡಿರುವ ವಿಡಿಯೊ ಸಂದೇಶದಲ್ಲಿ ಶ್ರೀ ಶ್ರೀ ರವಿಶಂಕರ್ ತಿಳಿಸಿದ್ದಾರೆ.

ಮದುವೆಯಾದವರು ಆರ್ಟ್‌ ಆಫ್‌ ಲಿವಿಂಗ್‌ ಸಂಸ್ಥೆಗೆ ಸೇರಿದವರೇ ಅಥವಾ ರೈಲಿನಲ್ಲಿ ಚಲಿಸುತ್ತಿದ್ದವರೇ ಎಂಬುದು ಇನ್ನೂ ತಿಳಿದುಬಂದಿಲ್ಲ.

‘ಭಾರತೀಯ ರೈಲ್ವೆ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಚಲಿಸುತ್ತಿರುವ ರೈಲಿನಲ್ಲಿ @ಶ್ರೀಶ್ರೀ ಉಪಸ್ಥಿತಿಯಲ್ಲಿ ಮದುವೆ ನಡೆದಿದೆ’ ಎಂದು ಶ್ರೀಶ್ರೀ ರವಿಶಂಕರ್ ಗುರೂಜಿ ಅವರ ಅನುಯಾಯಿಯೊಬ್ಬರು ಪ್ರಧಾನಿ ಮತ್ತು ರೈಲ್ವೆ ಸಚಿವರನ್ನು ಟ್ಯಾಗ್‌ ಮಾಡಿ ಟ್ವೀಟ್‌ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry