ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲು ಪ್ರಯಾಣದರದಲ್ಲಿ ಅಲ್ಪ ಇಳಿಕೆ

Last Updated 1 ಮಾರ್ಚ್ 2018, 19:52 IST
ಅಕ್ಷರ ಗಾತ್ರ

ನವದೆಹಲಿ: ರೈಲು ಪ್ರಯಾಣ ದರದಲ್ಲಿ ಅಲ್ಪ ಪ್ರಮಾಣದಲ್ಲಿ ಇಳಿಕೆ ಆಗಲಿದೆ ಎಂದು ರೈಲ್ವೆ ಇಲಾಖೆಯ ಪ್ರಕಟಣೆ ತಿಳಿಸಿದೆ.

₹1 ಲಕ್ಷದವರೆಗಿನ ಮೊತ್ತದ ಟಿಕೆಟ್‌ಗಳನ್ನು ಡೆಬಿಟ್‌ ಕಾರ್ಡ್‌ ಬಳಸಿ ಕಾಯ್ದಿರಿಸುವ ಪ್ರಯಾಣಿಕರಿಗೆ ‘ಬ್ಯಾಂಕ್‌ಗಳು ವರ್ತಕರಿಗೆ ವಿಧಿಸುತ್ತಿದ್ದ ಸೇವಾ ಶುಲ್ಕ’ (ಎಂಡಿಆರ್‌) ವೆಚ್ಚವನ್ನು ರೈಲ್ವೆ ಇಲಾಖೆ ಹಿಂಪಡೆದಿದೆ. ಇದರಿಂದ ರೈಲ್ವೆ ಕೌಂಟರ್‌ಗಳಲ್ಲಿ ಅಥವಾ ಐಆರ್‌ಸಿಟಿಸಿ ವೆಬ್‌ಸೈಟ್‌ ಮೂಲಕ ಟಿಕೆಟ್‌ ಕಾಯ್ದಿರಿಸುವ ಪ್ರಯಾಣಿಕರಿಗೆ ಟಿಕೆಟ್‌ ದರದಲ್ಲಿ ಅಲ್ಪ ಇಳಿಕೆಯಾಗಲಿದೆ.

ಈ ಕ್ರಮದಿಂದ ಡಿಜಿಟಲ್ ಮತ್ತು ನಗದುರಹಿತ ವಹಿವಾಟು ಹೆಚ್ಚುವ ವಿಶ್ವಾಸವಿದೆ. ಹಣಕಾಸು ಸೇವೆಗಳ ಇಲಾಖೆ ಈ ಕುರಿತು ಎಲ್ಲ ಬ್ಯಾಂಕ್‌ಗಳಿಗೆ ಸುತ್ತೋಲೆ ಕಳುಹಿಸಿದೆ ಎಂದು ಅದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT